ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಇದರ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಪಡುಮಲೆ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ಆ.8 ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮ
ಬೆಳಿಗ್ಗೆ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಆರಂಭಗೊಂಡು ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಶ್ರೀ ವರಮಹಾಲಕ್ಷ್ಮೀ ಪೂಜಾ ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮ
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿ ಗೌರವಾಧ್ಯಕ್ಷೆ ವೀಣಾ ಶ್ರೀನಿವಾಸ ಭಟ್ ಚಂದುಕೂಡ್ಲು ದೀಪ ಪ್ರಜ್ವಲಿಸಿ ಮಾತನಾಡಿ, ಶುಭ ಹಾರೖೆಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ನಮಿತ ಕೆ.ಕೆ, ರವರು ವರಮಹಾಲಕ್ಷ್ಮಿ ಪೂಜಾ ಉದ್ದೇಶ ಮತ್ತು ಅದರ ಮಹತ್ವದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.ಸಭೆಯು ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ನಿವೖತ್ತ ಹಿರಿಯ ಆರೋಗ್ಯ ಕರ್ತೆ ಪದ್ಮಾವತಿ ಬಿ ರೈ ಕುದ್ಮಾಡಿ, ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಹಾಗೂ ಶಾಂತಕುಮಾರಿ ಕೂವೆತೋಟ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಹಾಲಿ ಸದಸ್ಯರಾದ ಜನಾರ್ದನ ಪೂಜಾರಿ ಪದಡ್ಕ, ಶ್ರೀನಿವಾಸ್ ಗೌಡ ಕನ್ನಯ, ಪುರಂದರ ರೖೆ ಕುದ್ಕಾಡಿ, ಉದಯ ಕುಮಾರ್ ಪಡುಮಲೆ, ಶಂಕರಿ ಪಟ್ಟೆ, ಶೀಮತಿ ಕನ್ನಡ್ಕ, ಗೋಪಾಲ ನಾಯ್ಕ ದೊಡ್ಡಡ್ಕ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಪದಾಧಿಕಾರಿಗಳು, ಸಂಚಾಲಕರು ಸದಸ್ಯರು, ಮತ್ತು ವಿವಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಹಾಗೂ ಊರ ಭಕ್ತಾದಿಗಳು ಭಾಗವಹಿಸಿದ್ದರು.
ಸುಳ್ಯಪದವು ಮಹಾಲಕ್ಷ್ಮಿ ಮಹಿಳಾ ಭಜನಾ ಸಂಘದ ಸದಸ್ಯೆ ಸುಂದರಿ ಪ್ರಾರ್ಥಿಸಿದರು. ಪೂಜಾ ಸಮಿತಿ ಕಾರ್ಯದರ್ಶಿ ಭಾರತಿ ರೖೆ ಕುದ್ಕಾಡಿ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ರೇಖಾ ನಾಗರಾಜ್ ವಂದಿಸಿದರು, ಜೊತೆ ಕಾರ್ಯದರ್ಶಿ ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.
ಕೋಶಾಧಿಕಾರಿ ರಮಾಕಾಂತಿ ರೖೆ ಬೋಳಂಕೂಡ್ಲು, ಉಪಾಧ್ಯಕ್ಷೆ ಸುಲೋಚನಾ ನೆರ್ಲಂಪಾಡಿ, ಗೌರವ ಸಲಹೆಗಾರರಾದ ಶಂಕರಿ ಪಟ್ಟೆ, ಸಂಘಟನಾ ಕಾರ್ಯದರ್ಶಿ ರೇಖಾ ನಾಗರಾಜ್, ವಿಜಯಲಕ್ಷ್ಮಿ ನಾಯಕ್ ಪಡುಮಲೆ, ಸಂಚಾಲಕರಾದ ಯಶೋಧ ಆರ್ ಬಡಕ್ಕಾಯೂರು ಮತ್ತು ಸಾವಿತ್ರಿ ಪ್ರಭು ಪರಿಗೇರಿ ಅತಿಗಳಿಗೆ ಸಾಲು ಹಾಗೂ ಹೂ ನೀಡಿ ಗೌರವಿಸಿದರು.
ಭಜನಾ ಕಾರ್ಯಕ್ರಮ
ಬೆಳಿಗ್ಗೆ 8.30 ರಿಂದ ಶ್ರೀ ಕೂವೆ ಶಾಸ್ತಾರ ಸಾಂಸ್ಕೃತಿಕ ಸಮಿತಿ ಪಡುಮಲೆ, ಸರ್ವಶಕ್ತಿ ಮಹಿಳಾ ಮಂಡಳಿ ಪಡುಮಲೆ, ಆದಿಶಕ್ತಿ ಮಹಿಳಾ ಮಂಡಳಿ ಪಟ್ಟೆ, ಶ್ರೀ ವರಮಹಾಲಕ್ಷ್ಮಿ ವನಿತಾ ಭಜನಾ ಮಂಡಳಿ ಸುಳ್ಯಪದವು, ಶ್ರೀಕೃಷ್ಣ ಭಜನಾ ಮಂದಿರ ಮುಡಿಪಿನಡ್ಕ, ಶ್ರೀ ವರಮಹಾಲಕ್ಷ್ಮಿ ಮಹಿಳಾ ಭಜನಾ ಸಂಘ ಪಡುಮಲೆ,, ಮಹಾಲಕ್ಷ್ಮಿ ಮಹಿಳಾ ಭಜನಾ ಸಂಘ ಸುಳ್ಯಪದವು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸುಮಾರು 850 ಶ್ರೀ ವರಮಹಾಲಕ್ಷ್ಮಿ ಪೂಜೆ ಸೇವೆ ನಡೆದಿದ್ದು, ಸಮಾರು 1500 ಮಂದಿ ಭಕ್ತಾದಿಗಳು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.