ಪುತ್ತೂರು: ನಗರಸಭೆಗೆ ನೂತನವಾಗಿ ಆಗಮಿಸಿದ ಪೌರಾಯುಕ್ತೆ ವಿದ್ಯಾ ಎಂ ಕಾಳೆ ಅವರು ಪುತ್ತೂರು ನಗರಸಭೆಗೆ ಕುಡಿಯುವ ನೀರು ಸರಬರಾಜಾಗುವ ನೆಕ್ಕಿಲಾಡಿ ನೀರು ಸರಬರಾಜು ಘಟಕ ಮತ್ತು ಪಂಪ್ ಹೌಸ್ ಕಿಂಡಿ ಅಣೆಕಟ್ಟುವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ಗೇಟ್ ತೇರೆಯದೆ ಹೂಳು ತುಂಬುವ ಸಾಧ್ಯತೆ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಆಗಿತ್ತು. ಇದೀಗ ಪೌರಾಯುಕ್ತರು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬನ್ನೂರು ಘನ ತ್ಯಾಜ್ಯ ನಿರ್ವಹಣಾ ಘಟಕ, ಬಯೋ ಗ್ಯಾಸ್ ಘಟಕಕ್ಕೆ ಭೇಟಿ:
ಬನ್ನೂರು ನೆಕ್ಕಿಲ ಎಂಬಲ್ಲಿರುವ ಪುತ್ತೂರು ನಗರದ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿ – ಬಯೋ ಗ್ಯಾಸ್ ಘಟಕ, ಒಣ ತ್ಯಾಜ್ಯ ನಿರ್ವಹಣೆ, ನಿರ್ಮಾಣ ಹಂತದಲ್ಲಿರುವ ಯಂ ಆರ್ ಎಫ್ ಘಟಕದ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸ್ಥಳೀಯ ನಗರಸಭಾ ಸದಸ್ಯೆ ಗೌರಿ ಬನ್ನೂರು, ಸಹಾಯಕ ಕಾರ್ಯಪಾಲಕ ಅಭಿಯಂತರ ಶಭರಿನಾಥ್ ರೈ, ಸಹಾಯಕ ಅಭಿಯಂತರ ಕೃಷ್ಣಾಮೂರ್ತಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಸ್ವಚ್ಛ ಪುತ್ತೂರು ಟ್ರಸ್ಟ್‌ನ ಯೋಜನಾ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದರು.