ಒಡಿಯೂರು ಸಂಸ್ಥಾನದಲ್ಲಿ ಶ್ರೀಗಳ ಜನ್ಮದಿನೋತ್ಸವ-ʼಗ್ರಾಮೋತ್ಸವ 2025ʼ

0

ಸೇವೆಯಲ್ಲಿ ಆನಂದ ಪಡೆಯುವವರು ನಾವಾಗಬೇಕು: ಒಡಿಯೂರು ಶ್ರೀ

ವಿಟ್ಲ: ಬದುಕಿಗೆ ಸಂಸ್ಕಾರ ಅತೀ ಅಗತ್ಯ. ಹುಟ್ಟು ಹಬ್ಬದ ಆಚರಣೆಯಲ್ಲಿ ಸಂಸ್ಕಾರ ಅಗತ್ಯ. ಜಗತ್ತು ನಮಗೆ ಅನಿವಾರ್ಯ. ನಮ್ಮಲ್ಲಿರುವ ಅಹಂಕಾರ-ಮಮಕಾರ ಕಡಿಮೆಯಾಗಬೇಕು. ತುಲಾಭಾರ ಸೇವೆಯಲ್ಲಿ ಅರ್ಪಿತವಾದ ದ್ರವ್ಯ ಸಮಾಜಕ್ಕೆ ಸಮರ್ಪಿತವಾಗುತ್ತದೆ. ಪ್ರೀತಿ ಇದ್ದೆಡೆ ಕೀರ್ತಿ, ಸಂಪತ್ತು ತನ್ನಿಂತಾನೆ ಬರುತ್ತದೆ. ಗ್ರಾಮೋತ್ಸವದ ಒಡಲು ಪ್ರೀತಿ, ಸೇವೆಯಲ್ಲಿ ಆನಂದ ಪಡೆಯುವವರು ನಾವಾಗಬೇಕು. ಆಧ್ಯಾತ್ಮದ ತಿರುಳು ಆನಂದಮಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.


ಅವರು ಸಂಸ್ಥಾನದಲ್ಲಿ ಆ.8ರಂದು ಜನ್ಮದಿನೋತ್ಸವ – ಗ್ರಾಮೋತ್ಸವ 2025ರ ಅಂಗವಾಗಿ ನಡೆದ ಗುರುವಂದನೆ ಸೇವಾ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಹಿರಿಯರನ್ನು ಆಶ್ರಮಕ್ಕೆ ಸೇರಿಸುವುದು ಭಾರತೀಯತೆ ಅಲ್ಲ. ಸಮಾಜದಲ್ಲಿ ದ್ವೇಷ ಭಾವ ತುಂಬಿದೆ. ಎಲ್ಲೆಡೆ ಪ್ರೀತಿ ಭಾವ ಬಂದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ನಮ್ಮ ನಮ್ಮ ಮನೆಗಳಲ್ಲೇ ಪರಿವರ್ತನೆ ಆಗಬೇಕಿದೆ. ತ್ಯಾಗ ಸೇವೆಗೆ ಇನ್ನೊಂದು ಹೆಸರು ಹನುಮಂತ. ಸಂಭ್ರಮದ ಮರೆಯಲ್ಲಿ ಸಮಾಜದ ಋಣ ತೀರಿಸುವ ಕೆಲಸವಾಗುತ್ತಿದೆ. ತ್ಯಾಗದ ಬದುಕು ನಿಜ ಬದುಕು. ಆಂಗ್ಲ ಭಾಷೆಯ ವ್ಯಾಮೋಹ ಎಲ್ಲರಲ್ಲೂ ಹೆಚ್ಚಾಗುತ್ತಿದೆ. ಮಾತೃಭಾಷೆಯ ಬಗೆಗಿನ ವ್ಯಾಮೋಹ ಎಲ್ಲರೊಳು ಬರಬೇಕಿದೆ ಎಂದರು.


ಇದೊಂದು ಮಾದರಿ ಕಾರ್ಯಕ್ರಮ: ಶ್ರೀಗಳ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡರವರು ಮಾತನಾಡಿ ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಜನ್ಮ ದಿನವನ್ನು ಹೇಗೆ ಆಚರಿಸ ಬಹುದು ಎನ್ನುವುದಕ್ಕೆ ಶ್ರೀಗಳು ಒಂದು ಉದಾಹರಣೆ. ಜೀವನವನ್ನು ಸಾರ್ಥಕ್ಯ ಮಾಡುವ ಕಲಸ ನಮ್ಮದಾಗಬೇಕು. ಧರ್ಮಕ್ಕೆ ಸರಿಯಾದ ಫಲ ಭಗವಂತನಿಂದ ಸಿಗಲು ಸಾಧ್ಯ. ಜೀವನದಲ್ಲಿ ನಾವು ಮಾಡಿದ ಉತ್ತಮ ಕಾರ್ಯ ನಮ್ಮನ್ನು ಕಾಪಾಡುತ್ತದೆ. ಎಲ್ಲರೂ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ಕೆಲಸ ಮಾಡೋಣ ಎಂದರು.


ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಒಡಿಯೂರು ಶ್ರೀಗಳು ಜಗತ್ತಿಗೆ ಅನಿವಾರ್ಯ: ಎಕ್ಸ್‌ಪರ್ಟ್ ಗ್ರೂಪ್ ಆಫ್ ಎಜುಕೇಶನ್ ಇನ್ ಸ್ಟಿಟ್ಯೂಷನ್ಸ್, ಮಂಗಳೂರು ಇದರ ಅಧ್ಯಕ್ಷ ಪ್ರೊ| ನರೇಂದ್ರ ಎಲ್. ನಾಯಕ್ ರವರು ಮಾತನಾಡಿ ಭಜನೆಯಿಂದ ಸಾಧನೆ ಸಾಧ್ಯ. ಕಲಿಯುಗದಲ್ಲಿ ದೇವರನ್ನು ಒಲಿಸುವ ಸುಲಭ ಮಾರ್ಗ ಭಜನೆ. ಗುರಿ ಇಲ್ಲದಿದ್ದರೆ ಸಾಮಾಜಿಕವಾಗಿ ಬದಲಾವಣೆ ತರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಐದು ಭಜನೆಯನ್ನು ಕಲಿಯುವ ಪ್ರತಿeಯನ್ನು ಶ್ರೀಗಳ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಾಡೋಣ. ಮಕ್ಕಳಿಗೆ ಸಂಸ್ಕೃತಿ ಕಲಿಸುವುದೇ ಆಸ್ತಿ. ಸಮಾಜಕ್ಕೆ ಒಳಿತನ್ನು ಮಾಡುವುದೇ ಸೇವೆ. ಸಮಾಜದ ಏಳಿಗೆಗೆ ನಿರಂತರ ಶ್ರಮಿಸುತ್ತಿರುವ ಒಡಿಯೂರು ಶ್ರೀಗಳು ಜಗತ್ತಿಗೆ ಅನಿವಾರ್ಯ. ಹಿರಿಯರನ್ನು ದ್ವೇಷಿಸುವ ಬದಲು ಪ್ರೀತಿಸುವ ಕೆಲಸ ಮಾಡೋಣ. ಮಕ್ಕಳಿಗೆ ಮೊಬೈಲ್ ನೀಡುವುದನ್ನು ಕಡಿಮೆ ಮಾಡಿ ಎಂದರಲ್ಲದೆ ಮೊಬೈಲ್ ಮಕ್ಕಳ ಜೀವನಕ್ಕೆ ಮಾರಕ ಎಂದರು.


ಧರ್ಮ ಸಂಕಟದಲ್ಲಿದ್ದ ನನಗೆ ದಾರಿ ತೋರಿದವರು ಒಡಿಯೂರು ಶ್ರೀಗಳು: ಎಂ.ಬಿ.ಒ, ಮಂಗಳೂರು ಇದರ ಆಡಳಿತ ನಿರ್ದೇಶಕರಾದ ಡಾ| ಡಿ. ಸುರೇಶ್ ರಾವ್ ತುಳು ಭಾಷೆಗೆ ಅದರದೇ ಆದ ಸ್ಥಾನಮಾನ ಇದೆ. ಗುರುವಿನ ಅಭಯವಿದ್ದರೆ ಜೀವನದಲ್ಲಿ ಭಯವಿಲ್ಲ. ಧರ್ಮ ಸಂಕಟದಲ್ಲಿದ್ದ ನನಗೆ ದಾರಿ ತೋರಿದವರು ಒಡಿಯೂರು ಶ್ರೀಗಳು. ನಮ್ಮ ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ ಎಂದರು.


ಗುರುಹಿರಿಯರನ್ನು ಗೌರವಿಸುವ ಕೆಲಸವಾಗಬೇಕು: ಆದಾನಿ ಗ್ರೂಪ್ ಲಿ.ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವರವರು ಮಾತನಾಡಿ ಗುರುಹಿರಿಯರನ್ನು ಗೌರವಿಸುವ ಕೆಲಸವಾಗಬೇಕು. ದೇವರ ಮೇಲಿನ ನಂಬಿಕೆ ನಮ್ಮಲ್ಲಿರಬೇಕು. ಎಲ್ಲಾ ಜಾತಿಯವರನ್ನು ಗೌರವಿಸುವ ಕೆಲವಾಗಬೇಕು. ಯುವ ಪೀಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಅರಿಯುವ ಕೆಲಸ ಮಾಡಬೇಕು ಎಂದರು.


ಗುರುಬಲ ಮತ್ತು ಗುರಿ ಇದ್ದರೆ ಯಶಸ್ಸು ಸಾಧ್ಯ: ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆರವರು ಮಾತನಾಡಿ ಗುರುಬಲ ಮತ್ತು ಗುರಿ ಇದ್ದರೆ ಯಶಸ್ಸು ಸಾಧ್ಯ. ನಾವು ನಡೆದು ಬಂದ ಹಾದಿಯ ಅರಿವು ನಮಗಿರಬೇಕು. ಸಮಾಜದಲ್ಲಿ ನಾವು ಮಾಡಿದ ಪುಣ್ಯದ ಕೆಲಸ ನಮ್ಮನ್ನೂ ಕಾಪಾಡುತ್ತದೆ. ನಾವು ಪಟ್ಟ ಕಷ್ಟದ ಬಗ್ಗೆ ಇಂದಿನ ಪೀಳಿಗೆಯ ಮಕ್ಕಳಿಗೆ ತಿಳಿ ಹೇಳುವ ಕೆಲಸವಾಗಬೇಕು. ಹಲವಾರು ವರುಷಗಳ ಹಿಂದಿನಿಂದಲೇ ಈ ಕ್ಷೇತ್ರಕ್ಕೆ ಬಂದಿದ್ದೆ. ಆದರೆ ಇದೀಗ ಇಲ್ಲಿನ ಬದಲಾವಣೆ ಕಂಡು ತುಂಬಾ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಶ್ರೀಗಳ ಸಾಮಾಜಿಕ ಚಟುವಟಿಕೆಯಲ್ಲಿ ನಾವುಗಳು ಕೈ ಜೋಡಿಸಲು ಬದ್ಧರಿದ್ದೇವೆ ಎಂದರು.


ಇಂತಹ ಸ್ವಾಮೀಜಿಯನ್ನು ಪಡೆದ ನಾವು ಧನ್ಯರು: ಮುಂಬೈ ನ ವೆಲ್‌ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ರವೀಂದ್ರನಾಥ ಭಂಡಾರಿರವರು ಮಾತನಾಡಿ ಇಲ್ಲಿನ ಕಾರ್ಯಕ್ರಮ ಶಿಸ್ತಿನಿಂದ ಕೂಡಿದೆ. ಇಂತಹ ಸ್ವಾಮೀಜಿಯನ್ನು ಪಡೆದ ನಾವು ಧನ್ಯರು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವೇ ನಮ್ಮನ್ನು ಕಾಪಾಡುತ್ತದೆ. ಸ್ವಾಮೀಜಿಯವರ ಸಾಮಾಜಿಕ ಕಳಕಳಿಯ ಕೆಲಸ ಅಭಿನಂದನಾರ್ಹ ಎಂದರು.
ಸಾದ್ವೀ ಶ್ರೀ ಮಾತಾನಂದಮಯೀರವರು ಉಪಸ್ಥಿತರಿದ್ದರು. ಅಂಕ್ಲೇಶ್ವರದ ಹೋಟೆಲ್ ಉದ್ಯಮಿ ಶಂಕರ ಕೆ. ಶೆಟ್ಟಿ, ಶ್ರೀಗಳ ಜನ್ಮದಿನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಎ.ಸುರೇಶ್ ರೈ, ಶ್ರೀಗಳ ಜನ್ಮದಿನೋತ್ಸವ ಮುಂಬೈ ಸಮಿತಿ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ ಮುಂಬೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆದ ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಯಿತು. ಗ್ರಾಮೋತ್ಸವದ ಪ್ರಯುಕ್ತ ಆಯೋಜನೆ ಮಾಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿವಿಧ ಸಹಾಯಹಸ್ತ ವಿತರಣೆ ಮಾಡಲಾಯಿತು. ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು.


ಒಡಿಯೂರು ಶ್ರೀ ಗುರುದೇವ ಸೇವಾಬಳಗ ಮುಂಬೈ ಇದರ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಸ್ವಾಗತಿಸಿದರು. ಐಟಿಐ ಶಿಕ್ಷಕ ಜಯಂತ್ ಅಜೇರು ಸಹಕರಿಸಿದರು. ಯಶವಂತ ವಿಟ್ಲ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ವೈದಿಕ – ಸಾಂಸ್ಕೃತಿಕ ಕಾರ್ಯಕ್ರಮ: ಬೆಳಗ್ಗೆ ಶ್ರೀ ಗಣಪತಿ ಹವನ, ಮಹಾಪೂಜೆ, ಬಳಿಕ ರವಿರಾಜ್ ಒಡಿಯೂರು ಮತ್ತು ಬಳಗದವರಿಂದ – ನಾಮಸಂಕೀರ್ತನೆ ನಡೆಯಿತು. ಆ ಬಳಿಕ ಪಾದಪೂಜೆ – ರಜತ ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನೆ ನಡೆಯಿತು. ಅಪರಾಹ್ನ ೩ ಗಂಟೆಯಿಂದ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ವ್ರತಪೂಜೆ ನಡೆಯಿತು.


ಸಾಯಂಕಾಲ ಮಂಗಳೂರು ಶ್ರೀ ಲಲಿತೆ ಕಲಾವಿದರಿಂದ ’ಶನಿ ಮಹಾತ್ಮೆ’ ಕನ್ನಡ ನಾಟಕ ನಡೆಯಿತು. ರಾತ್ರಿ 7ಗಂಟೆಯಿಂದ ಶ್ರೀ ಸನ್ನಿಽಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿ ರಥೋತ್ಸವ, ಮಹಾಪೂಜೆ ನಡೆಯಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಊರಪರವೂರ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀಗಳ ಪಾದಪೂಜೆ ಶ್ರೀಗಳ ಜನ್ಮದಿನೋತ್ಸವ ಸಮಿತಿ ಪ್ರಧಾನಕೋಶಾಽಕಾರಿ ಲೋಕನಾಥ ಜೆ. ಶೆಟ್ಟಿ ತಾಳಿಪ್ಪಾಡಿಗುತ್ತು ಅವರ ಪತ್ನಿ ಸರಿತಾ ರವರು ಪಾದಪೂಜೆ ನೆರವೇರಿಸಿದರು. ಸಾದ್ವೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ವೇ.ಮೂ. ಚಂದ್ರಶೇಖರ ಉಪಾಧ್ಯಾಯ ಕುರೆಮೂಲೆರವರು ವಿಽವಿಧಾನ ನೆರವೇರಿಸಿದರು.

LEAVE A REPLY

Please enter your comment!
Please enter your name here