ನಾಳೆ (ಆ.10) ಧ್ವನಿ, ಬೆಳಕು, ಶಾಮಿಯಾನ ಹಾಗೂ ಡೆಕೋರೇಶನ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ – ರಕ್ತದಾನ ಶಿಬಿರ

0

ಪುತ್ತೂರು: ತಾಲೂಕಿನ ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ ಮಾಲಕರ ಸಂಘ (ರಿ.) ಪುತ್ತೂರು ಇದರ ವಾರ್ಷಿಕ ಮಹಾಸಭೆಯು ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಆ.10 ರಂದು ಬೆಳಗ್ಗೆ 10 ರಿಂದ ಪಡೀಲ್ ಎಂ.ಡಿ.ಎಸ್ ಟ್ರಿನಿಟಿ ಹಾಲ್ ನಲ್ಲಿ, ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದೊಂದಿಗೆ ನಡೆಯಲಿದೆ.


ತಾಲೂಕು ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ ಮಾಲಕರ ಸಂಘದ ಅಧ್ಯಕ್ಷ, ಕೃಷ್ಣನಗರದಲ್ಲಿರುವ ಆಶೀರ್ವಾದ ಶಾಮಿಯಾನ ಇದರ ಮಾಲಕ ರಾಮಕೃಷ್ಣ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ದಕ್ಷಿಣ ಕನ್ನಡ ಶಾಮಿಯಾನ ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಕೆ ವಿಟ್ಲ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷರಾದ ಧನ್‌ರಾಜ್ ಶೆಟ್ಟಿ, ದ.ಕ. ಧ್ವನಿ ಮತ್ತು ಬೆಳಕು ಸಂಘದ ಗೌರವಾಧ್ಯಕ್ಷರಾದ ರಾಜಶೇಖರ್ ಶೆಟ್ಟಿ ಭಾಗವಹಿಸಲಿದ್ದು, ಪುತ್ತೂರು ತಾಲೂಕು ಸಂಘಟನೆಯ ಗೌರವಾಧ್ಯಕ್ಷ ಶ್ಯಾಮ್ ಮಂಜುನಾಥ ಪ್ರಸಾದ್, ಎಂ.ಡಿ.ಎಸ್ ಆ್ಯರೆಂಜರ್ಸ್ ಮಾಲಕ ಹೆನ್ರಿ ಡಿ’ಸೋಜ, ರೋಟರಿ ಬ್ಲಡ್ ಬ್ಯಾಂಕ್ ವೈದ್ಯರಾದ ಡಾ. ರಾಮಚಂದ್ರ ಭಟ್ ಹಾಗೂ ಸವಣೂರು ಪದ್ಮಾಂಬ ಶಾಮಿಯಾನ ಮಾಲಕ ಸುರೇಶ್ ರೈ ಸೂಡಿಮುಳ್ಳು ಉಪಸ್ಥಿತರಿರಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here