ಪುತ್ತೂರು: ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾ ಸಂಘ ವಿಟ್ಲ ವಲಯ ಆಯೋಜಿಸಿದ ಸಮಾಜ ಬಾಂಧವರ ಸಮಾವೇಶದಲ್ಲಿ ತುಳು ರಂಗಭೂಮಿಯ ಹಾಸ್ಯ ಕಲಾವಿದ ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡುರವರಿಗೆ ರಂಗಭೂಮಿಯ ಕಲಾಸೇವೆಗಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ಎ.ಬಿ.ಗಂಗಾಧರ ಬಲ್ಲಾಳ್‌ರವರ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಾಣಾಜೆಯ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ.ವೇದಾವತಿ ಜೆ.ಬಲ್ಲಾಳ್, ನಿವೃತ್ತ ಯೋಧ ಸುರೇಂದ್ರ ಕುಮಾರ್, ಕೃಷಿ ಮತ್ತು ಹೈನುಗಾರಿಕೆಯಲ್ಲಿ ವೀಣಾ ಭಾಸ್ಕರ ಬಲ್ಲಾಳ್, ಯಕ್ಷಗಾನ ಚೆಂಡೆವಾದಕರಾಧ ಮರಿಯಮ್ಮ ಬಲ್ಲಾಳ್ ಚಿಪ್ಪಾರು, ಜೆಸಿಯಲ್ಲಿ ಚಿನ್ಮಯ ಕೃಷ್ಣ ವರ್ಮರವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಬಿ.ರಂಗಯ್ಯ ಬಲ್ಲಾಳ್‌ರವರು ತುಳು ರಂಗಭೂಮಿ ಕಲಾವಿದರಾಗಿ, ಧಾರ್ಮಿಕ ಉಪನ್ಯಾಸಕರಾಗಿ, ಹಿನ್ನಲೆ ಗಾಯಕರಾಗಿ, ಸುಸ್ವರ ಮೆಲೋಡಿಸ್ ಸಂಗೀತ ರಸಮಂಜರಿಯ ಸಾರಥಿಯಾಗಿ ಚಿರಪರಿಚಿತರಾಗಿದ್ದಾರೆ.
ವೇದಿಕೆಯಲ್ಲಿ ಪುತ್ತೂರು ವಲಯ ಅಧ್ಯಕ್ಷರಾದ ಬಿ.ಚಂದ್ರಹಾಸ ಬಲ್ಲಾಳ್, ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಸುದರ್ಶನ್ ಪಾಡಿ, ಕೋಶಾಧಿಕಾರಿ ಮುರಳೀಧರ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಜಗದೀಶ ಬಲ್ಲಾಳ್, ವಿಟ್ಲ ವಲಯ ಅಧ್ಯಕ್ಷ ನಾರಾಯಣ ಬಲ್ಲಾಳ್, ಬೆಟ್ಟಂಪಾಡಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮಹಿಳಾ ಘಟಕದ ಕಾರ್ಯದರ್ಶಿ ಶ್ಯಾಮಲಾ ಮಧುಸೂದನ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು. ಪ್ರಸನ್ನ ಕುಮಾರ್ ಬಲ್ಲಾಳ್ ಸ್ವಾಗತಿಸಿ, ಪ್ರಾಂಶುಪಾಲ ವಸಂತ ಬಲ್ಲಾಳ್ ವಂದಿಸಿದರು. ಸುಮನಾ ಆರ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.