ಕೆಮ್ಮಾಯಿ ಸ.ಪ್ರಾ ಶಾಲೆಯಲ್ಲಿ ಪುತ್ತೂರು ವಲಯ ಮಟ್ಟದ ಚದುರಂಗ ಸ್ಪರ್ಧೆ

0

ಪುತ್ತೂರು:ಕೆಮ್ಮಾಯಿ ಕೃಷ್ಣನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ವಿಭಾಗದ ಚದುರಂಗ ಸ್ಪರ್ಧೆ ಆ.6ರಂದು ನಡೆಯಿತು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ S.D.M.C ಅಧ್ಯಕ್ಷ ರವಿ ಇವರು ವಹಿಸಿದ್ದರು. ಕಾರ್ಯಕ್ರಮವನ್ನು ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡವು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಚದುರಂಗ ಆಟದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕೋಡಿಂಬಾಡಿ ಕ್ಲಸ್ಟರ್ C.R.P ಅಶ್ರಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಲಾಖೆಯ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ತಾಲೂಕು ದೈ. ಶಿ . ಶಿ. ಸಂಘದ ಅಧ್ಯಕ್ಷ ಕೃಷ್ಣಯ್ಯ , ಅನಾಸ್ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಕೃಷ್ಣ, ಪ್ರೌಢಶಾಲಾ ವಿಭಾಗದ ದೈ.ಶಿ. ಶಿಕ್ಷಕರ ತಾಲೂಕ್ ನೋಡಲ್ ನರೇಶ್ ಲೋಬೋ , S.D.M.C ಉಪಾಧ್ಯಕ್ಷ ರೆಹಮತ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಮರಿಯಮ್ಮ P.S ಇವರು ಸ್ವಾಗತಿಸಿದರು.

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ತಾಲೂಕು ಪ್ರಭಾರ ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಕ ಚಕ್ರಪಾಣಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಶಾಲಾ S.D.M.C ಸದಸ್ಯರು ಹಾಗೂ ದಾನಿಗಳು ಸಹಕಾರ ನೀಡಿದರು. ದೈಹಿಕ ಶಿಕ್ಷಕರಾದ ಸ್ಟ್ಯಾನಿ ಪ್ರವೀಣ್ ಹಾಗು ಕುಸುಮಾವತಿ ಅವರ ನೇತೃತ್ವದಲ್ಲಿ ಪುತ್ತೂರು ನಗರ ವಲಯದ ಎಲ್ಲಾ ದೈ. ಶಿ. ಶಿಕ್ಷಕರು ತೀರ್ಪುಗಾರಿಕೆಯಲ್ಲಿ ಸಹಕರಿಸಿದರು.

ದೈಹಿಕ ಶಿಕ್ಷಕಿ ಕುಸುಮಾವತಿ ವಂದಿಸಿದರು. ಸಹ ಶಿಕ್ಷಕಿ ಶ್ರುತಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ಶೇಷಮ್ಮ, ನಾಗವೇಣಿ, ಗಾಯತ್ರಿ, ಯಶಸ್ವಿನಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿಯವರು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here