ಪುತ್ತೂರು: ಬಿ.ಇ.ಒ ಆಫೀಸ್ ಬಳಿಯ ಸಾರಥಿ ಭವನದಲ್ಲಿ ಕಾರ್ಯಚರಿಸುತ್ತಿರುವ :ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಆ.10 ರಂದು ಸಂಘದ ಅಧ್ಯಕ್ಷ ಇ.ನಾರಾಯಣ ಹೇರಳೆರವರ ಅಧ್ಯಕ್ಷತೆಯಲ್ಲಿ ಅಪರಾಹ್ನ(3.30 ಗಂಟೆಗೆ) ಪುತ್ತೂರು-ಕೊಂಬೆಟ್ಟು ದ್ರಾವಿಡ ಬ್ರಾಹ್ಮಣ ಸಂಘದ ಸಭಾಂಗಣದಲ್ಲಿ ಜರಗಲಿದೆ.
ಸಂಘದ ಸದಸ್ಯರು ಸಭೆಗೆ ಹಾಜರಾಗಿ ಸಂಘದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ್ ಹೊಳ್ಳರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.