ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರದಲ್ಲಿ ಆಟಿ ತಿಂಗಳ ವಿಶೇಷ ತಿನಿಸುಗಳ ಪರಿಚಯ ಹಾಗೂ ಉಪಯುಕ್ತತೆ ಮಹತ್ವವನ್ನು ತಿಳಿಯಲು ಆಟಿದ ಗಮ್ಮತ್ತ್ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಶಾಂತ್ ಶೆಟ್ಟಿ ವಗ್ಗ ನೆರವೇರಿಸಿ, ಆಟಿ ಅಮವಾಸ್ಯೆ ದಿವಸ ಮಾಡುವ ಕಷಾಯದ ಮಹತ್ವ ಹಾಗೂ ಆಟಿ ತಿಂಗಳ ವಿಶೇಷತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಅಧ್ಯಕ್ಷತೆಯನ್ನು ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ಮುಖ್ಯ ಅತಿಥಿಗಳಾಗಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆಯಾದ ಶಬನಾ ಶೇಖ್ ಮಾತನಾಡಿ, ಈಗಿನ ಯುವ ಸಮೂಹಕ್ಕೆ ಆಟಿ ಬಗ್ಗೆ ಅರಿವು ಇಲ್ಲ. ಅದಕ್ಕಾಗಿ ಶಾಲಾ ಹಂತದಲ್ಲಿ ಇಂತಹ ಕಾರ್ಯಕ್ರಮಗಳು ಇಟ್ಟು ತಿಳಿಯ ಪಡಿಸಿದರೆ, ಮುಂದಿನ ಪೀಳಿಗೆಗೆ ಉಪಯುಕ್ತ ಎಂದು ತಿಳಿಸಿದರು.
ಉಪಾಧ್ಯಕ್ಷೆ ನಿಶಿತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೋ, ಫ್ರೌಡ ವಿಭಾಗದ ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಟಿ ತಿಂಗಳ ವಿಶೇಷ ಅಡುಗೆಗಳಾದ ಪತ್ರೊಡೆ, ಉಪ್ಪಡಚ್ಚಿಲ್, ತಂಜಕ್ ಚಟ್ನಿ ಮುಂತಾದ ಅಡುಗೆ ವಿದ್ಯಾರ್ಥಿಗಳು ತಂದು ಗಣ್ಯರಿಗೆ ಸವಿಯಲು ಅವಕಾಶ ನೀಡಿದರು ಹಾಗೂ ಹಳೆ ಕಾಲದ ಪರಿಕರಗಳ ಪ್ರದರ್ಶನ ಕೂಡ ನಡೆಯಿತು. ನಂತರ ತುಳು ಸಾಂಪ್ರದಾಯಿಕ ನೃತ್ಯ, ಹಾಡು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಿತು. ಫಾತಿಮ ನೌಶೀಯ ಸ್ವಾಗತಿಸಿದರು. ಅಂಕಿತಾ ಪ್ರಾಸ್ತಾವಿಕ ಭಾಷಣಗೈದರು. ತೃಷಾ ಧನ್ಯವಾದ ಸಲ್ಲಿಸಿದರು. ಸನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.