ಅಧ್ಯಕ್ಷರಾಗಿ ಝಕರಿಯಾ ಮಾಂತೂರು; ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಎಂ.ಎ
ಪುತ್ತೂರು: ಬದ್ರಿಯಾ ಜುಮಾ ಮಸೀದಿ ಚಾಪಲ್ಲ ಸವಣೂರು ಇದರ ಅಧೀನದಲ್ಲಿ ಮೀಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಜಮಾಅತ್ ಕಮಿಟಿ ಅಧ್ಯಕ್ಷ ಕನಿಮಜಲು ಮಹಮ್ಮದ್ ಹಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರಾಗಿ ಝಕರಿಯಾ ಮಾಂತೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಎಂ.ಎ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಕೆ.ಎಂ ಮಹಮ್ಮದ್ ನಝೀರ್ ಮುಂಡತ್ತಡ್ಕ, ಕಾರ್ಯದರ್ಶಿಯಾಗಿ ಉಮ್ಮರ್ ಎಸ್, ಕೋಶಾಧಿಕಾರಿಯಾಗಿ ಉಮ್ಮರ್ ಕುಂಞಿ ಜನತಾ ಆಯ್ಕೆಯಾದರು. ಸದಸ್ಯರುಗಳಾಗಿ ಬಿ.ಎಂ ಅಹ್ಮದ್ ಹಾಜಿ, ಈಸುಬು ಹಾಜಿ ಕಾಯರ್ಗ, ಬಶೀರ್ ಕಾಯರ್ಗ, ರಝಾಕ್ ಚಾಪಲ್ಲ, ಇಕ್ಬಾಲ್ ಕೆನರ, ಅಬ್ದುಲ್ ಕರೀಂ ಮೌಲ, ಅಶ್ರಫ್ ಬಿ ಎಂ, ಅಝೀಝ್ ಕುರ್ತಲ, ಸವಾದ್ ಪಟ್ಟೆ, ಎಸ್ ಇ ಆಬ್ದುಲ್ಲ, ನಝೀರ್ ಸಿ.ಎ, ಅಶ್ರಫ್ ಎಂ.ಕೆ, ರಝಾಕ್ ಅಝ್ಹರಿ ಮೊದಲಾದವರನ್ನು ಆಯ್ಕೆ ಮಾಡಲಾಯಿತು.