ಆಲಂಕಾರು ವಲಯ ಬಂಟರ ಸಂಘದ ವತಿಯಿಂದ ಬಂಟರ ಸಮಾವೇಶ, ಸಾಧಕರಿಗೆ ಸನ್ಮಾನ : ಆಟಿದಕೂಟ ಕಾರ್ಯಕ್ರಮ

0


ಆಲಂಕಾರು: ಆಲಂಕಾರು ವಲಯ ಬಂಟರ ಸಂಘ ಮತ್ತು ಯುವ ಬಂಟರ ಸಂಘ ಆಲಂಕಾರು ವಲಯ ಇದರ ಆಶ್ರಯದಲ್ಲಿ ಆಟಿದ ಕೂಟ, ಬಂಟರ ಸಮಾವೇಶ, ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ ಮತ್ತು ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರಧಾನ, ಗ್ರಾಮೀಣ ಒಳಾಂಗಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆ.10 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ ದಯಾಳು ರೈತ ಸಭಾ ಭವನದಲ್ಲಿ ನಡೆಯಿತು.


ಆಟಿದ ಕೂಟದ ಉದ್ಘಾಟನೆಯನ್ನು ಪುತ್ತೂರಿನ ಮಾಜಿ ಶಾಸಕರಾದ ಶಕುಂತಳಾ ಟಿ.ಯವರು ನೇರವೆರಸಿ ತುಳುನಾಡಿನಲ್ಲಿ ಆಟಿಕೂಟಕ್ಕೆ ಬಹಳ ಮಹತ್ವ ಇದೆ. ಅಟಿ ತಿಂಗಳಿನಲ್ಲಿ ವಿವಿಧ ಗಿಡ ಮೂಲಿಕೆಗಳನ್ನು ನಾವು ತಿನ್ನುವುದರ ಮೂಲಕ ನಾವು ದೈಹಿಕವಾಗಿ ಮತ್ತು ಮಾನಸಿಕ ವಾಗಿ ಸದೃಡರಾಗುವುದರೊಂದಿಗೆ ನಮ್ಮ ಆರೋಗ್ಯ ವೃದ್ದಿಯಾಗುತ್ತದೆ ಆಲಂಕಾರು ವಲಯ ಬಂಟರ ಸಂಘದಲ್ಲಿ ಮಹಿಳೆಯರು ಪ್ರತಿ ಮನೆಯಿಂದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ಎಲ್ಲರಿಗೂ ಅಟಿಕೂಟದಲ್ಲಿ ಉಣಬಡಿಸುವುದು ಬಹಳ ಸಂತೋಷದ ವಿಚಾರವಾಗಿದ್ದು ಇದೇ ತರ ಮಹಿಳೆಯರಿಂದ ವಿನೂತನ ಕಾರ್ಯಕ್ರಮಗಳು ಅಟಿಕೂಟದಲ್ಲಿ ಮೂಡಿಬರಲಿ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು.



ಗ್ರಾಮೀಣ ಒಳಾಂಗಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಸಭಾಕಾರ್ಯಕಮ ನಡೆಯಿತು. ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು (ರಿ.) ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾದ ದುರ್ಗಾಪ್ರಸಾದ್ ರೈಯವರು‌‌ ಮಾತನಾಡಿ ಬಂಟ ಸಮಾಜದವರು ಎಲ್ಲಾ ಸಮಾಜದವರನ್ನು ಒಟ್ಟುಕೂಡಿಸಿಕೊಂಡು ಹೋಗುವವರು,ಅದು ನಮಗೆ ಹಿರಿಯರು ಕೊಟ್ಟಂತಹ ಕೊಡುಗೆ ನಾವು ಇಲ್ಲಿನ ಮೂಲ‌ನಿವಾಸಿಗಳಾಗಿದ್ದು ಈ ಮಣ್ಣಿನ ಸಂಸ್ಕೃತಿಯನ್ನು ಎತ್ತಿ ಹಿಡಿದವರು ಎಂದು ತಿಳಿಸಿ ಜಾತಿ ಸಂಘಟನೆಗಳು ಸಂವಿಧಾನದ ತತ್ವಗಳಿಗೆ ಪೂರಕವಾಗಿರಬೇಕು ನಾವು ಉತ್ತಮ ಕೆಲಸಗಳನ್ನು ನಿರ್ವಹಿಸಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಆಲಂಕಾರು ವಲಯ ಬಂಟರ ಸಂಘ ರಚನಾತ್ಮಕ ಕೆಲಸದೊಂದಿಗೆ ಸಮಾಜವನ್ನು ಒಟ್ಟು ಗೂಡಿಸುವ ಕೆಲಸ ಕಾರ್ಯ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಧಕರಿಗೆ ಸನ್ಮಾನ,ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಯನ್ನು ಮನವಳಿಕೆ ದಾಸಪ್ಪ ರೈ ಯವರ ಸುಪುತ್ರರಾದ ವಿಜಯ ರೈ ಮನವಳಿಕೆಯವರಿಗೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾನಿಷಾ ಶೆಟ್ಟಿ ಅಂಬರಾಜೆ ಸೇರಿದಂತೆ ಅನೇಕ ಮಂದಿ ಸಾಧಕರನ್ನು ಸಭೆಯಲ್ಲಿ ಗೌರವಿಸಲಾಯಿತು. ನಂತರ
ಸಭಾದ್ಯಕ್ಷತೆಯನ್ನು ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ.ಕೆಯವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ 24 ವರ್ಷಗಳಿಂದ ಆಲಂಕಾರು ವಲಯ ಬಂಟರ ಸಂಘ ಬಂಟರ ಸಮಾವೇಶ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ಕಾರ್ಯಗಳು ಆಯೋಜನೆ ಮಾಡಿಕೊಂಡು ಬಂದಿದ್ದು ಸಹಕರಿಸಿದವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಈ ಭಾರಿ ಮಹಿಳೆಯರು ಮತ್ತು ಪುರುಷರು ಅಟಿಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ಮಾಡಿದ್ದಾರೆ ಎಂದು ತಿಳಿಸಿ ಇನ್ನೂ ಮುಂದೆಯೂ ಆಲಂಕಾರು ವಲಯ ಬಂಟರ ಸಂಘದ ಕಾರ್ಯಕ್ರಮದಲ್ಲಿ ಎಲ್ಲಾರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ದುಡಿಯುವಂತೆ ವಿನಂತಿಸಿದರು.

ಬೆಳ್ತಂಗಡಿ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಪುಷ್ಪರಾಜ ಶೆಟ್ಟಿ, ಬ್ಯಾಂಕ್ ಆಫ್ ಬರೋಡ ನಿವೃತ್ತಾಧಿಕಾರಿ ಬಾಲಚಂದ್ರ ಶೆಟ್ಟಿ ನೀರಾಜೆ, ಬಂಟರಯಾನೆ ನಾಡವರ ಮಾತೃಸಂಘದ ಮಂಗಳೂರಿನ ಪುತ್ತೂರು ಸಮಿತಿಯ ಮಾಜಿ ಸಂಚಾಲಕರು ಹಾಗು ಪ್ರಸಕ್ತ ನಿರ್ದೇಶಕರಾಗಿರುವ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ತಾಲ್ಲೂಕು ಬಂಟರ ಸಂಘದ ನಿರ್ದೇಶಕರಾದ ರಾಧಾಕೃಷ್ಣ ರೈ ಪರಾರಿಗುತ್ತು, ಸುಭಾಸ್ ಶೆಟ್ಟಿ ಆರುವಾರ,ಇಂದುಶೇಖರ ಶೆಟ್ಟಿ ಕುಕ್ಕೇರಿ,ಆಲಂಕಾರು ವಲಯ ಬಂಟರಸಂಘದ ಉಪಾಧ್ಯಕ್ಷರಾದ ರಾಮಮೋಹನ ರೈ ಸುರುಳಿ, ಪ್ರಭಾರಘನಾಥ ಚೌಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಲಂಕಾರು ವಲಯ ಬಂಟರ ಸಂಘದ ಸಂಘದ ಪ್ರದಾನ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು,ಕೋಶಾಧಿಕಾರಿ ಲೋಕನಾಥ ರೈ ರಾಮಕುಂಜ ಕಾರ್ಯಕ್ರಮ ನಿರೂಪಿಸಿ ಸುಭಾನು ರೈ ಮರುವಂತಿಲ,ಪ್ರಶಾಂತ ರೈ ಬಲೆಂಪೂಡಿ ಅತಿಥಿಗಳನ್ನು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಚೆನ್ನಕೇಶವ ರೈ, ಗುತ್ತುಪಾಲು,ಧನ್ಯಶ್ರೀ ರೈ,ಮಮತಾ ಶೆಟ್ಟಿ ಅಂಬರಾಜೆ, ಶೃತಿಪ್ರಸಾದ್ ರೈ ಕೇವಳ,ಅಧಿತಿ ರೈ, , ಪ್ರದಿತಿ ರೈ ಮನವಳಿಕೆ, ಶ್ರಾವ್ಯಶ್ರೀ ರೈ ಮರುವಂತಿಲ ವಿವಿಧ ಕಾರ್ಯಕ್ರಮ ನಿರೂಪಿಸಿದರು.


ಯುವಬಂಟರ ಸಂಘದ ಅಧ್ಯಕ್ಷ ಗುರುಕಿರಣ್ ಶೆಟ್ಟಿ ಬಾಲಾಜೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಯುವಬಂಟರ ಸಂಘದ ಕಾರ್ಯದರ್ಶಿ ಕವನ್ ರೈ ಮನವಳಿಕೆ ಸೇರಿದಂತೆ ಹಲವು‌ ಮಂದಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಆಟಿಕೂಟದಲ್ಲಿ‌ ಮಹಿಳೆಯರು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ 40ಕ್ಕೂ ಹೆಚ್ಚು ತಿಂಡಿ ತಿನಸುಗಳನ್ನು ಎಲ್ಲರಿಗೂ ಬಡಿಸುವುದರ ಮೂಲಕ ಆಲಂಕಾರು ವಲಯ ಬಂಟರ ಸಂಘದ ಸಮಾವೇಶ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ , ಆಟಿಕೂಟ ಕಾರ್ಯಕ್ರಮಗಳು ಬಹಳ‌ ಯಶಸ್ವಿಯಾಗಿ ಮೂಡಿ ಬಂದಿದೆ.

LEAVE A REPLY

Please enter your comment!
Please enter your name here