ಪುತ್ತೂರು: ದರ್ಬೆ ಮಹಾಲಿಂಗೇಶ್ವರ ಕಟ್ಟೆಯಲ್ಲಿದ್ದ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಬಕ ವಿದ್ಯಾಪುರ ನಿವಾಸಿ ಸಂಶುದ್ದೀನ್ ಯಾನೆ ಸಂಶು (52ವ.) ಬಂಧಿತ ಆರೋಪಿ.
ವಾರದ ಹಿಂದೆ ದರ್ಬೆಯಲ್ಲಿರುವ ಮಹಾಲಿಂಗೇಶ್ವರ ಕಟ್ಟೆಯಿಂದ 10 ಕೆ.ಜಿ. ತೂಕದ ರೂ.8 ಸಾವಿರ ಬೆಲೆ ಬಾಳುವ ತಾಮ್ರದ ಗಂಟೆಯೊಂದು ಕಳ್ಳತನವಾಗಿತ್ತು. ಈ ಕುರಿತ ದೂರಿಗೆ ಸಂಬಂಧಿಸಿ ತನಿಖೆ ಕೈಗೊಂಡ ಪುತ್ತೂರು ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕಳವಾದ ಗಂಟೆಯನ್ನು ಆರೋಪಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 2004ರಲ್ಲಿ ದಾಖಲಾಗಿದ್ದ ಪ್ರಕರಣ (ಅ.ಕ್ರ. 83/2004)ರಲ್ಲಿಯೂ ಈತ ಆರೋಪಿಯಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.