ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಮುಂದಿನ ಮೂರು ವರ್ಷದ ಅವಧಿಗೆ ಸಂಚಾಲಕರಾಗಿ ಅಶೋಕ್ ಕುಮಾರ್ ಪಡ್ಪು, ಸದಸ್ಯರಾಗಿ ವಿಮಲ ಸುರೇಶ್, ಮೋಹನ್ ತೆಂಕಿಲ, ಮಾಧವ ಸಾಲಿಯಾನ್ ಕುರೆಮಜಲುರವರು ನೇಮಕಗೊಂಡಿದ್ದಾರೆ.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ.
ಸಂಚಾಲಕರಾಗಿ ಆಯ್ಕೆಯಾದ ಹಿರೇಬಂಡಾಡಿ ಗ್ರಾಮದ ಪಡ್ಪು ನಿವಾಸಿಯಾದ ಅಶೋಕ್ ಕುಮಾರ್ ರವರು ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ, ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷರಾಗಿ, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿಯ 30ನೇ ವಾರ್ಷಿಕ ಸಮಾವೇಶದ ಸಂಚಾಲಕರಾಗಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ನಿರ್ದೇಶಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ದ್ವಿತೀಯ ಉಪಾಧ್ಯಕ್ಷರಾಗಿ ಹಾಗೂ ಹಿರೇಬಂಡಾಡಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ, ಬ್ರಹ್ಮಕಳಸ ಸಮಿತಿಯ ಪ್ರಧಾನ ಸಂಚಾಲಕರಾಗಿ ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಪ್ರಸ್ತುತ ಬಿಲ್ಲವ ಗ್ರಾಮ ಸಮಿತಿ ಉಪ್ಪಿನಂಗಡಿ ವಲಯ ಇದರ ಸಂಚಾಲಕರಾಗಿ, ಹಿರೇಬಂಡಾಡಿ ಶಿವನಗರ ಮಂಜುಶ್ರೀ ಸೇವಾ ಟ್ರಸ್ಟಿನ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಥಮ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿಸುತ್ತಿದ್ದಾರೆ.