ಕೖೊಲ-ಬಡಗನ್ನೂರು ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಬಡಗನ್ನೂರು: ಕೖೊಲ-ಬಡಗನ್ನೂರು ಸ. ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಶಾಲಾ ಎಸ್ ಡಿಯಂಸಿ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪೋಷಕರ ಜಂಟಿಯಾಗಿ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅ.10ರಂದು ನಡೆಯಿತು.

ಶ್ರಮದಾನದಲ್ಲಿ ಶಾಲಾ  ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆ ಮತ್ತು ಮರ ಬಿದ್ದು ಕುಸಿದು ಸಭಾಂಗಣದ ಕಲ್ಲು ತೆಗೆಯುವುದು ಹಾಗೂ ಮತ್ತಿತರ ಕೆಲಸ ನಡೆಯಿತು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ರಮೇಶ್ ರೈ ಕೖೊಲ, ವಸಂತಗೌಡ ,ಕೖೊಲ ವನಿತಾ ವಸಂತ ಗೌಡ, ಸತೀಶ್ ಓ, ಕೌಶಿಕ್ ಗೌಡ, ನಾರಾಯಣ ಪೂಜಾರಿ ಪೇರಾಲು, ಅನಿಲ ನಯನ ರೈ ಬಡಕ್ಕಾಯೂರು, ಲತಾ ಕುಮಾರಿ, ಸುಧಾ ಪಿ, ಸಿಲಂಬರಸಿ ಲಲಿತ, ವಿನಯಲಕ್ಷ್ಮಿ, ಮಧುಶ್ರೀ ಕೖೊಲ, ಪುಷ್ಪಾವತಿ ಪೇರಾಲು, ಯಶೋಧ ಬಡಕ್ಕಾಯೂರು, ಚಿತ್ರಾವತಿ, ಗೀತಾ ಪೇರಾಲು, ಗುಲಾಬಿ, ಯಶೋಧ ಪ್ರಸಾದ್ ರೈ ಕೖೊಲ, ಮಮತಾ, ವಸಂತಿ ತಲೆಂಜಿ ಭಾಗವಹಿಸಿದ್ದರು.

ಶಾಲಾ ಎಸ್ ಡಿಯಂ. ಸಿ ಉಪಾಧ್ಯಕ್ಷ  ಸತೀಶ್ ನಾಯ್ಕ 2 ದಿವಸ ಮೆಷಿನ್ ಮೂಲಕ  ಹುಲ್ಲು ತೆಗೆಯುವ ಹಾಗೂ ರವಿರಾಜ್ ರೈ ಬಡಕ್ಕಾಯೂರು 1 ದಿನದ ಗಾರೆ ಕೆಲಸವನ್ನು ಉಚಿತವಾಗಿ ನಡೆಸಿದರು.

ಶಾಲಾ ಮಕ್ಕಳು ಧ್ವಜಸ್ತಂಭ ತೊಳೆದು ಸ್ವಚ್ಛಗೊಳಿಸಿದರು.

LEAVE A REPLY

Please enter your comment!
Please enter your name here