
ಪುತ್ತೂರು: 2025ನೇ ಸಾಲಿನ ಶ್ರೀಕೃಷ್ಣ ವೇಷ ಸ್ಪರ್ಧೆಯು ಆ.10ರಂದು ವಿದ್ಯಾಮಾತಾ ಅಕಾಡೆಮಿಯ ಸಭಾಂಗಣದಲ್ಲಿ ನಡೆಯಿತು.
ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿ, ಅಂತರಾಷ್ಟ್ರೀಯ ತರಬೇತಿ ಸಂಸ್ಥೆಯಾದ ಜೆಸಿಐನ ಪುತ್ತೂರು ಘಟಕ, ಚಿಕ್ಕ ಮಕ್ಕಳಿಗಾಗಿ ಇರುವ ನಂದಗೋಕುಲ ಚಿಣ್ಣರ ಅಂಗಳ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಒಂದರಿಂದ ಮೂರರ ವಯೋಮಾನ ಹಾಗೂ ಮೂರರಿಂದ ಆರು ವರ್ಷದ ವಯೋಮಾನದ ವರೆಗಿನ ಪುಟಾಣಿಗಳಿಗಾಗಿ ನಡೆದ ಸ್ಪರ್ಧೆಯ ಉದ್ಘಾಟನೆಯನ್ನು ಜೆಸಿಐ ಪುತ್ತೂರಿನ ಪೂರ್ವಅಧ್ಯಕ್ಷರು ವಕೀಲೆ ಜೆಸಿ ಸ್ವಾತಿ ಜೆ ರೈ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ 75 ಪುಟಾಣಿಗಳು ಭಾಗವಹಿಸಿದ್ದು, ಪ್ರತಿ ಪುಟಾಣಿಗೂ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ತೀರ್ಪುಗಾರರಾಗಿ ಶಿಕ್ಷಕಿ ಕವಿತಾ ಹಾಗೂ ತುಳು ಅಕಾಡೆಮಿಯ ಮಾಜಿ ಸದಸ್ಯೆ ತುಳು ಬರಹಗಾರ್ತಿ ಶ್ರೀಶ ವಾಸವಿ ಪಡುಮಲೆಯವರು ಸಹಕರಿಸಿದರು.
ವೇದಿಕೆಯಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರು ಜೆಸಿಐ ಪುತ್ತೂರು ಘಟಕದ ಅಧ್ಯಕ್ಷರು ಆಗಿರುವ ಜೆಸಿ ಭಾಗ್ಯೇಶ್ ರೈ ಉಪಸ್ಥಿತರಿದ್ದು, ಚಿಕ್ಕಂದಿನಿಂದಲೇ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸಿ ಕೊಡುವುದರ ಮೂಲಕ ಮುಂದಿನ ಭವಿಷ್ಯಕ್ಕೆ ಬುನಾದಿ ಹಾಕುವ ಕೆಲಸವನ್ನು ವಿದ್ಯಾಮಾತಾ ಅಕಾಡೆಮಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ನಂದಗೋಕುಲ ಚಿಣ್ಣರ ಅಂಗಳದ ವ್ಯವಸ್ಥಾಪಕಿ ಪವಿತ್ರ ವಸಂತ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾಮಾತಾ ಅಕಾಡೆಮಿಯ ತರಬೇತಿದಾರರಾದ ಚೇತನಾಸತೀಶ್, ಸ್ವಾತಿ ರೈ ಹಾಗೂ ಚಂದ್ರಕಾಂತ್ ರವರು ನಿರ್ವಹಿಸಿದರು. ಜೆಸಿ ಪುತ್ತೂರಿನ ಸದಸ್ಯರು, ಅಕಾಡೆಮಿಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.
ಫಲಿತಾಂಶದ ವಿವರಗಳು
ಒಂದರಿಂದ ಮೂರು ವರ್ಷದ ವಯೋಮಾನದ ವಿಭಾಗ
ಪ್ರಥಮ : ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ಜನಾರ್ಧನ ದುರ್ಗಾ ಮತ್ತು ಶೋಭಾ ದಂಪತಿಗಳ ಪುತ್ರಿ ಬೇಬಿ ಚವಿಷ್ಕ ,
ದ್ವಿತೀಯ: ಸುಳ್ಯ ತಾಲೂಕು ಮುರುಳ್ಯ ಕೀರ್ತನ್ ಮತ್ತು ನಿರೀಕ್ಷಾ ಶೆಟ್ಟಿ ದಂಪತಿಗಳ ಪುತ್ರಿ ಬೇಬಿ ದಿತ್ಯಾ ಕೆ ಶೆಟ್ಟಿ,
ತೃತೀಯ: ಪುತ್ತೂರು ತಾಲೂಕು ಕಾಣಿಯೂರು ಮಹೇಶ್ ಮತ್ತು ಭವ್ಯ ದಂಪತಿಗಳ ಪುತ್ರ ಮಾಸ್ಟರ್ ಡಿಯಾಂಶ್. ಎಂ.ಪಿ.
ಮೂರರಿಂದ ಆರರ ವಯೋಮಾನದ ವಿಭಾಗ
ಪ್ರಥಮ: ಪುತ್ತೂರು ತಾಲೂಕು, ಕೊಡಿಪಾಡಿ ಗ್ರಾಮದ ಪದ್ಮನಾಭ ಗೌಡ ಮತ್ತು ಶುಭವತಿ ದಂಪತಿಗಳ ಪುತ್ರಿ ಜಶ್ಮಿ ಕೆ.ಪಿ .
ದ್ವಿತೀಯ: ಮಡಂತ್ಯಾರು ನಿವಾಸಿ ಶಶಿಕುಮಾರ್ ಮತ್ತು ಸವಿತಾ ದಂಪತಿಗಳ ಪುತ್ರ ಮಾಸ್ಟರ್ ಚಿನ್ಮಯ್
ತೃತೀಯ: ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಚಂದ್ರಶೇಖರ ಮತ್ತು ಚೈತನ್ಯ ದಂಪತಿಗಳ ಪುತ್ರಿ ಬೇಬಿ ಚಾರ್ವಿ ಸಿ. ರೈ