ಪುತ್ತೂರು: ಪುತ್ತೂರು ಜಗದೀಶ್ ಆಚಾರ್ಯ ಸಂಗೀತ ನಿರ್ದೇಶನ ಮತ್ತು ಗಾಯನದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅರಾಧನ ಭಕ್ತಿಗೀತೆ ಅ.9ರಂದು ಶ್ರೀ ಗುರು ರಾಘವೇಂದ್ರ ಮಠ ಮಂತ್ರಾಲಯದಲ್ಲಿ ಸ್ವಾಮಿಗಳ ಅರಾಧನ ಮಹೋತ್ಸವದಲ್ಲಿ ಶ್ರೀ ಮಠದ ಪಿಠಾಧಿಪತಿ ಸುಭುದೇಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ಹಸ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಶ್ರೀ ಜಗನ್ನಾಥ ವಿಠಲ ದಾಸರು ರಚಿಸಿರುವ, ಉದಯ ಕುಮಾರ್, ನಾಗರತ್ನ ಉದಯ ಕುಮಾರ್ ನಿರ್ಮಾಣದ ಈ ಹಾಡಿಗೆ ಸಹಗಾಯನದಲ್ಲಿ ಜನ್ಯ ಪ್ರಸಾದ್ ಅನಂತಾಡಿ, ಅಶ್ವಿನಿ ಕೊಳಿಕ್ಕಜೆ, ಸಾಹಿತ್ಯ ಆಚಾರ್ಯ, ವೈಷ್ಣವಿ ಮಂಗಳೂರು ಸಹಕರಿಸಿದ್ದಾರೆ. ಈ ದಾಸರ ಪದ ಜಗದೀಶ್ ಪುತ್ತೂರು ಯುಟ್ಯೂಬ್ನಲ್ಲಿ ಹಾಗೂ ಎಲ್ಲ ಪ್ರಮುಖ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ಗಳಲ್ಲಿ ಲಭ್ಯವಿದೆ.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಅ.9ರಂದು ಸಂಜೆ ಯೊಗೀಂದ್ರ ಮಂಟಪದಲ್ಲಿ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಜಗದೀಶ್ ಆಚಾರ್ಯ ಬಳಗದಿಂದ ಶ್ರೀ ಹರಿಗಾನಾಮೃತ ನಡೆಯಿತು.
