ನವದೆಹಲಿ: ಇತ್ತೀಚೆಗೆ ಮನುಷ್ಯರ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚಾಗಿ ರೇಬಿಸ್ಗೆ ಬಲಿ ಆಗುತ್ತಿದ್ದಾರೆ. ಈ ಸಂಬಂಧ ದೆಹಲಿ ಹಾಗೂ ಎನ್ಸಿಆರ್ನಲ್ಲಿನ ಬೀದಿ ನಾಯಿಗಳನ್ನು ಹಿಡಿದು ಅವುಗಳ ಆಶ್ರಯಕ್ಕೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಸಂಬಂಧ ಪಟ್ಟ ಕಚೇರಿಗಳು, ಅಧಿಕಾರಿಗಳು 8 ವಾರದ ಒಳಗಾಗಿ ದೆಹಲಿ ಹಾಗೂ ಎನ್ಸಿಆರ್ ಪ್ರದೇಶದ ಬೀದಿಗಳಲ್ಲಿರುವ ನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ಗೆ ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುವ ನಾಯಿಗಳನ್ನು ಹಿಡಿಯಬೇಕು. ಅವುಗಳಿಗೆ ಆಶ್ರಯ ಸೌಲಭ್ಯ ಒದಗಿಸಲು ಮುನ್ಸಿಪಾಲ್ ಮತ್ತು ಇತರೆ ಏಜೆನ್ಸಿಗಳು ಕೂಡಿ ಕೆಲಸ ಮಾಡಬೇಕು. ನ್ಯಾಯಾಲಯ ನೀಡಿದ ಗಡುವಿನ ಒಳಗೆ ಕೆಲಸ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.