ಆಲಂಕಾರು: ಜೀರ್ಣೋದ್ದಾರಗೊಳ್ಳುತ್ತಿರುವ ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ’ಶಿವಭಕ್ತ ವೀರಮಣಿ’ ಯಕ್ಷಗಾನ ತಾಳಮದ್ದಳೆ ಆ.9ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಕುಮಾರಿ ಸಿಂಚನಾ ಮೂಡುಗೋಡಿ, ಚಂದ್ರ ದೇವಾಡಿಗ ನಗ್ರಿ, ಗಣೇಶ್ ಭಟ್ ಬೆಳಾಲು, ಮುರಳೀಧರ ಆಚಾರ್ಯ ಹಳೆನೇರೆಂಕಿ, ಮೋಹನ ಶರವೂರು, ಸಮರ್ಥ್ ವಿಷ್ಣು ಈಶ್ವರಮಂಗಲ ಸಹಕರಿಸಿದರು. ಮುಮ್ಮೆಳದಲ್ಲಿ ಪ್ರಸಾದ್ ಸವಣೂರು, ಹರಿಶ್ಚಂದ್ರ ಗೌಡ ಕೋಡ್ಲ (ವೀರಮಣಿ ), ರಾಮ್ ಪ್ರಕಾಶ್ ಕೊಡಂಗೆ (ರುಕ್ಮಾಂಗ), ಜನಾರ್ದನ ಸುರಿಯ ಉಜಿರೆ (ಶುಭಾಂಗ), ರಾಮ್ ಪ್ರಸಾದ್ ಆಲಂಕಾರು, ಜಯರಾಂ ಗೌಡ ಬಲ್ಯ (ಶತ್ರುಘ್ನ), ಗಣರಾಜ ಕುಂಬ್ಳೆ, ರಾಘವೇಂದ್ರ ಭಟ್ ತೋಟಂತಿಲ (ಹನುಮಂತ), ಗಣೇಶ್ ಹಿರಿಂಜ (ಪುಷ್ಕಳ), ದಿವಾಕರ ಆಚಾರ್ಯ ಹಳೆನೇರೆಂಕಿ (ಈಶ್ವರ), ನಾರಾಯಣ ಭಟ್ ಆಲಂಕಾರು (ಶ್ರೀ ರಾಮ) ಸಹಕರಿಸಿದರು. ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅರ್ಚಕ ರಾಮ ಕಲ್ಲೂರಾಯ ಮತ್ತು ರಾಮ್ ಪ್ರಸಾದ್ ಆಲಂಕಾರು ಹಾಗೂ ಮನೆಯವರು ಸೇವಾರ್ಥಿಗಳಾಗಿದ್ದರು. ಸೇವಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಸೇವಾ ಪ್ರಸಾದ ನೀಡಲಾಯಿತು. ರಾಮ ಕಲ್ಲೂರಾಯ, ಸಿಂಚನಾ, ಸಮರ್ಥ್ ವಿಷ್ಣು, ಪ್ರಸಾದ್ ಸವಣೂರು ಇವರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಆಲಂಕಾರು ಶ್ರೀ ದುರ್ಗಾಂಬಾ ಕಲಾ ಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಹಳೆನೇರೆಂಕಿ ಸ್ವಾಗತಿಸಿ, ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.