ಪುತ್ತೂರು: ಗಾಣಿಗ ಸೇವಾನಿರತ ಸಂಘ ಈಶ್ವರಮಂಗಲ ಇದರ ವತಿಯಿಂದ ಆಟಿಕೂಟ ಕಾರ್ಯಕ್ರಮವು ಈಶ್ವರಮಂಗಲದ ಅನುಗ್ರಹ ಸಭಾಭವನದಲ್ಲಿ ಆ.10ರಂದು ನಡೆಯಿತು.
ಪೂರ್ವಾಹ್ನ 11:15ಕ್ಕೆ ಚೆನ್ನಮಣೆ ಆಟದೊಂದಿಗೆ ಉದ್ಘಾಟನೆಯನ್ನು ಸಂಘದ ಗೌರವಾಧ್ಯಕ್ಷೆ ಶಂಕರಿ ಪಟ್ಟೆ ನೆರವೇರಿಸಿ ಆಟಿ ತಿಂಗಳ ವಿಶೇಷತೆಗಳ ಬಗ್ಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಚಂದ್ರಶೇಖರ್ ಪೆರ್ನಾಜೆ ವಹಿಸಿದ್ದರು. ಪ್ರಾರ್ಥನೆಯನ್ನು ಪ್ರಶಾಂತ್ ಸ್ವರ್ಣ ಗಿರಿ ನೆರವೇರಿಸಿದರು. ಪ್ರಸ್ತಾವಿಕ ಮಾತಿನೊಂದಿಗೆ ಸ್ವಾಗತ ಕಾರ್ಯಕ್ರಮವನ್ನು ಚಂದ್ರಶೇಖರ್ ಕುಕ್ಕುಪುಣಿ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ರಾಮಪಾಟಾಳಿ ಕೆಲಂದೂರು ಅವರು ಆಟಿಕೂಟ ಔಚಿತ್ಯವನ್ನು ಸವಿವರವಾಗಿ ತಿಳಿಸಿದರು. ಜಿಲ್ಲಾ ಸಂಘದ ಪದಾಧಿಕಾರಿ ಸುಬ್ಬಪ್ಪ ಪಾಟಾಳಿ ಪಟ್ಟೆ GPL ಬಗ್ಗೆ ಸಂಸ್ಥೆಗೆ ಇರುವ ಜವಾಬ್ದಾರಿಯನ್ನು ಹೇಳಿದರು. ವೇದಿಕೆಯಲ್ಲಿ ರಾಮಪಾಟಾಳಿ ಮಾಣ್ಯೊಟ್ಟು ಉಪಸ್ಥಿತರಿದ್ದರು.
ಹಿರಿಯರಾದ ರಾಮ ಪಾಟಾಳಿ ಮಾಣ್ಯೊಟ್ಟುರವರು ಆರೋಗ್ಯ ನಿಧಿಯನ್ನು ಉದ್ಘಾಟಿಸಿದರು. ಶೈಲಜಾ ಕೆ ಆರ್ ರವರು ಧನ್ಯವಾದ ಸಮರ್ಪಿಸಿ, ಹರ್ಷಿತಾ ಸೋಣಂಗೇರಿ ನಿರ್ವಹಣೆ ಮಾಡಿದರು.
ಸದಸ್ಯರು ಸ್ವತಃ ತಯಾರಿಸಿದ 32 ಬಗೆಯ ಖಾದ್ಯಗಳನ್ನು ಸಹ ಭೋಜನದ ಮೂಲಕ ಸವಿಯಲಾಯಿತು.
ಒಂದರಿಂದ ನಾಲ್ಕನೇ ತರಗತಿಯ ಪುಟಾಣಿಗಳಿಗೆ ರಸಪ್ರಶ್ನೆ, 5 ರಿಂದ 7ನೇ ತರಗತಿಯ ಮಕ್ಕಳಿಗೆ ಸ್ಮರಣ ಶಕ್ತಿ ಬಗ್ಗೆ ಪರೀಕ್ಷೆ ಮತ್ತು 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇತಿಹಾಸ, ಪೌರಾಣಿಕ ಮತ್ತು ವಾಸ್ತವದ ಬಗ್ಗೆ ರಸಪ್ರಶ್ನೆಯನ್ನು ನಡೆಸಲಾಯಿತು. ವಿಜೇತರಿಗೆ ಬಹುಮಾನವನ್ನು ನಾರಾಯಣ ಮಾಸ್ಟರ್ ಎಡನೀರು, ಮಹಾಲಿಂಗ ಕುದ್ಕಾಡಿ, ಸುಬ್ಬಪ್ಪ ಪಾಟಾಳಿ ಪಟ್ಟೆ ಹಾಗೂ ಕೇಶವ ಕೋರಿಗದ್ದೆ ಇವರು ವಿತರಿಸಿದರು.