ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ’ರಕ್ಷಾಬಂಧನ’ ಆಚರಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ರಕ್ಷಾಬಂಧನ ಹಬ್ಬ ಆಚರಿಸಲಾಯಿತು.



ಅತಿಥಿಯಾಗಿ ಆಗಮಿಸಿದ ಶ್ರೀ ರಾಮಕುಂಜೇಶ್ವರ ಪಿ.ಯು.ಕಾಲೇಜು ವಾಣಿಜ್ಯ ವಿಭಾಗದ ಉಪನ್ಯಾಸಕ ಚೇತನ್ ಮೊಗ್ರಾಲ್‌ರವರು ರಕ್ಷಾಬಂಧನದ ಮೂಲಕ ಸಹೋದರ-ಸಹೋದರಿಯರ ನಡುವಿನ ಶಾಶ್ವತ ಬಾಂಧವ್ಯದ ಮಹತ್ವದ ಬಗ್ಗೆ ತಿಳಿಸಿದರು. ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ಬಾಲಚಂದ್ರ ಮುಚಿಂತ್ತಾಯ, ಹರಿನಾರಾಯಣ ಆಚಾರ್ಯ, ಪ್ರಾಂಶುಪಾಲ ಪ್ರವಿದ್ ಪಿ. ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಲಹರಿ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ರಕ್ಷಾಬಂಧನ ಕುರಿತು ಹಾಡು ಹಾಡಿದರು. ವಿದ್ಯಾರ್ಥಿಗಳು ಪರಸ್ಪರರಿಗೆ ರಾಖಿ ಕಟ್ಟಿಕೊಂಡು, ಸ್ನೇಹ, ಪ್ರೀತಿ ಮತ್ತು ಪರಸ್ಪರರ ಕಲ್ಯಾಣಕ್ಕಾಗಿ ಹಾರೈಸಿದರು. ಶಿಕ್ಷಕಿ ಅಭಿಚೈತ್ರ ಸ್ವಾಗತಿಸಿದರು. ಸಿಂಥಿಲಿಯಾ ಮೆನೆಸೆಸ್ ವಂದಿಸಿದರು. ವಾಣಿಶ್ರೀ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರು, ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here