ಪುತ್ತೂರು: ಪುತ್ತೂರು ಬಿಲ್ಲವ ಸಂಘದ ಮಾರ್ಗದರ್ಶನದಲ್ಲಿ ಬಿಲ್ಲವ ಸಮುದಾಯದ ಫಲಾನುಭವಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಸಹಾಯಧನ, ಪ್ರತಿಭಾ ಪುರಸ್ಕಾರ ಇತ್ಯಾದಿ ಉದ್ದೇಶಗಳಿಗೆ ಸ್ಥಾಪಿಸಲಾದ ವಿನೂತನ ವಿದ್ಯಾನಿಧಿ ಯೋಜನೆಯ ಸಂಚಾಲಕರಾಗಿ ಉಲ್ಲಾಸ್ ಕೋಟ್ಯಾನ್, ಸದಸ್ಯರುಗಳಾಗಿ ಗಿರೀಶ್ ಸಾಲ್ಯಾನ್ ಬದನೆ(ಇಚ್ಲಂಪಾಡಿ), ರವಿ ಕಲ್ಕಾರ್ ಶಾಂತಿಗೋಡು, ರಾಜೇಶ್ ನೆಲ್ಲಿತ್ತಡ್ಕ ನಿಡ್ಪಳ್ಳಿರವರನ್ನು ನೇಮಿಸಲಾಗಿದೆ.

ಇತ್ತೀಚೆಗೆ ಪುತ್ತೂರು ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರ ನೇತೃತ್ವದಲ್ಲಿ ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ.
ವಿದ್ಯಾನಿಧಿ ಯೋಜನೆಯ ನೂತನ ಸಂಚಾಲಕರಾಗಿ ಆಯ್ಕೆಯಾದ ಉಲ್ಲಾಸ್ ಕೋಟ್ಯಾನ್ ರವರು ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿಯಾಗಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಪದವೀಧರ ಶಿಕ್ಷಕರ ಕ್ಷೇತ್ರದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.