ಪುತ್ತೂರು : ಬನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ವರ್ಷದ ಕಾರ್ಯಕ್ರಮವಾಗಿ ಸ್ಥಳೀಯ ಸಂಘ ಸಂಸ್ಥೆಯಾದ ಸ್ಪೂರ್ತಿ ಯುವ ಸಂಸ್ಥೆ ಬನ್ನೂರು ಇವರ ಸಹಯೋಗದೊಂದಿಗೆ ಆಟಿ-ಕೂಟ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್ ಆಚಾರ್ಯ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಗೌಡ ಬಲ್ಯ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಪಾಂಡುರಂಗಗೌಡ, ಕಾರ್ಯದರ್ಶಿ ಸುಹಾಸ್ ರೈ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಜಯಕುಮಾರ್ ಜೈನ್, ಅಧ್ಯಕ್ಷ ದಿನೇಶ್ ಸಾಲಿಯಾನ್, ಕಾರ್ಯದರ್ಶಿ ಹೈದರ್, ಸ್ಪೂರ್ತಿ ಯುವ ಸಂಸ್ಥೆಯ ಉಪಾಧ್ಯಕ್ಷ ನವೀನ್ ರೈ ಬನ್ನೂರು, ಸದಸ್ಯರಾದ ಪ್ರೀತಂ ರೈ, ಪ್ರಮೋದ್ ಗೌಡ, ನಿವೃತ್ತ ಸೈನಿಕ ವಸಂತ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ, ಮಹಿಳೆ ಮತ್ತು ಪುರುಷರಿಗೆ ವಿವಿಧ ರೀತಿಯ ಜನಪದ ಮನೋರಂಜನ ಆಟ ನಡೆಯಿತು.ಮಕ್ಕಳ ಪೋಷಕರು ಮತ್ತು ಊರವರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ತಂದು ಹಂಚಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಸ್ಥಳೀಯ ಸ್ಪೂರ್ತಿ ಯುವ ಸಂಸ್ಥೆಯ ಸದಸ್ಯರುಗಳು, ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು. ಮಕ್ಕಳ ವಿವಿಧ ಆಟಗಳನ್ನು ಶಿಕ್ಷಕ ಗ್ರೇಟಾ ಮಸ್ಕರೇನಸ್, ಉಸ್ಮಾನ್, ಸುಷ್ಮಾ ಮತ್ತು ಪೋಷಕರಾದ ರಶ್ಮಿ ಸುಹಾಸ್ ರೈ ನಡೆಸಿಕೊಟ್ಟರು. ಶಾಲಾ ಮುಖ್ಯ ಗುರು ಮಹಮ್ಮದ್ ಅಶ್ರಫ್ ಕಾರ್ಯಕ್ರಮವನ್ನು ನಿರೂಪಿಸಿದರು.