ಪ್ರಿಯದರ್ಶಿನಿಯಲ್ಲಿ ರಕ್ಷಾ ಬಂಧನ ಹಾಗೂ ಸಂಸ್ಕೃತ ದಿನಾಚರಣೆ

0

ಜಗತ್ತಿನ ಬಹು ಭಾಷೆಗಳಿಗೆ ಸಂಸ್ಕೃತವೇ ಮೂಲ. ದೇವ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡೋಣ – ವೆಂಕಟೇಶ್ ಪ್ರಸಾದ್

ಬೆಟ್ಟಂಪಾಡಿ: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾ ಗಿರಿ ಬೆಟ್ಟಂಪಾಡಿ ಇಲ್ಲಿ ರಕ್ಷಾ ಬಂಧನ ಹಾಗೂ ಸಂಸ್ಕೃತ ದಿನಾಚರಣೆಯನ್ನು ಆ.9ನೇ ಶನಿವಾರ ಕೇಶವದರ್ಶಿನಿ ಸಭಾಂಗಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ಸಂಸ್ಕೃತ ಅಧ್ಯಾಪಕರಾದ ವೆಂಕಟೇಶ ಪ್ರಸಾದ್ ಇವರು ಮಾತನಾಡುತ್ತ, ಸಂಸ್ಕೃತವು ದೇವಭಾಷೆ ಅದು ಎಲ್ಲಾ ಭಾಷೆಗಳಿಗೆ ಮೂಲ. ಆಂಗ್ಲ ಭಾಷೆಗೆ ಕೂಡ ಸಂಸ್ಕೃತವೇ ಮೂಲ ಎಂದು ಸೋದಹ ರಣವಾಗಿ ಪ್ರತಿಪಾದಿಸಿದರು. ಸಂಸ್ಕೃತ ಭಾಷೆಯ ವ್ಯಾಕರಣ ಗ್ರಂಥವಾದ ಅಷ್ಟಾಧ್ಯಾಯಿ ಕರ್ತೃವಾದ ಪಾಣಿನಿ ಮಹರ್ಷಿಗಳ ಜನ್ಮದಿನದ ನೆನಪಿಗಾಗಿ ಸಂಸ್ಕೃತ ದಿನವನ್ನು ಶ್ರಾವಣ ಹುಣ್ಣಿಮೆಯಂದು ವಿಶ್ವದಾದ್ಯಂತ ಆಚರಿಸುತ್ತಾರೆಂದು ಅವರು ತಿಳಿಸಿದರು.

ಜೊತೆಗೆ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸುವ ಸಂದರ್ಭದಲ್ಲಿ ಚಕ್ರವ್ಯೂಹವು ಕೈಯ ಕಿರುಬೆರಳಿಗೆ ತಾಗಿ ರಕ್ತ ಸುರಿಯುವ ಸಂದರ್ಭದಲ್ಲಿ ದ್ರೌಪದಿಯು ಆಕೆಯ ಸೀರೆ ಹರಿದು ಕೃಷ್ಣನನ್ನು ರಕ್ಷಿಸಿದ ಪುರಾಣದ ಕಥೆಯ ಮೂಲಕ ರಕ್ಷಾಬಂಧನದ ಭ್ರಾತೃತ್ವದ ಮಹತ್ವ ತಿಳಿಸಿದರು.ಎಲ್ಲಾ ವಿದ್ಯಾರ್ಥಿಗಳು ಪರಸ್ಪರ ಆರತಿ ಬೆಳಗಿ ರಾಖಿ ಕಟ್ಟಿದರು. ಸಭಾಂಗಣದ ಇನ್ನೊಂದು ಮಗ್ಗುಲಲ್ಲಿ ಸಂಸ್ಕೃತ ವಸ್ತು ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಗುರು ರಾಜೇಶ್ ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಕೃತ ಅಧ್ಯಾಪಕರಾದ ಶಿವರಾಮ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಪ್ರಣವ್ ಸಿ ಎಚ್ ವಂದಿಸಿದರು. ವಿದ್ಯಾರ್ಥಿಗಳಾದ ಕುಮಾರಿ ಅನನ್ಯ ಹಾಗೂ ಶ್ರಾವ್ಯ ಯು ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here