ಪುತ್ತೂರು: ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಸಾಹಿತ್ಯೋತ್ಸವವು ಆಗಸ್ಟ್ 10 ರಂದು ಮೇನಾಲ ಮಸ್ಜಿದು ಸ್ವಹಾಬದಲ್ಲಿ ನಡೆಯಿತು.
ಮಸ್ಜಿದು ಸ್ವಹಾಬ ಕಾರ್ಯಾಧ್ಯಕ್ಷ ಹಂಝ ಮುಸ್ಲಿಯಾರ್ ಈಶ್ವರಮಂಗಳ ಧ್ವಜಾರೋಹಣ ಮಾಡಿ ದುಆ ನೆರವೇರಿಸಿದರು. ಸೆಕ್ಟರ್ ಅಧ್ಯಕ್ಷ ಸಿ.ಎಂ ಸಿದ್ದೀಖ್ ಹಾಶಿಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಲೇಖಕ ಎ.ಕೆ ನಂದಾವರ ಉದ್ಘಾಟಿಸಿದರು.
ತ್ವೈಬಾ ಸಾರಥಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಎಸ್ ವೈ ಎಸ್ ರಾಜ್ಯ ನಾಯಕರಾದ ಹಮೀದ್ ಕೊಯಿಲ, ಮೇನಾಲ ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ಅಬ್ದುಲ್ಲಾ ಮೆಣಸಿನಕಾನ ಹಿತ ನುಡಿಗಳನ್ನಾಡಿದರು. ಪ್ರೋಗ್ರಾಮ್ ಸಮಿತಿ ಕನ್ವೀನರ್ ಮುದಸ್ಸಿರ್ ಶರವು ಸ್ವಾಗತಿಸಿ ವಂದಿಸಿದರು.
ಬಳಿಕ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ಸೆಕ್ಟರ್ ನ ಸಪ್ತ ಶಾಖೆಗಳ ಸುಮಾರು 150 ಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು 120 ಸ್ಪರ್ಧೆಗಳಲ್ಲಿ ಭಾಗವಹಿಸಿ ಮೇನಾಲ ಯುನಿಟ್ ಚಾಂಪಿಯನ್, ಮಾಡನ್ನೂರು ಯುನಿಟ್ ರನ್ನರ್ಸ್ ಹಾಗೂ ಕೊಯಿಲ ಯುನಿಟ್ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

ಸ್ಟೇಜ್ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಅತೀ ಹೆಚ್ಚು ಅಂಕ ಪಡೆದ ಮಾಡನ್ನೂರ್ ಯುನಿಟ್ ನ ಸುಹೈಲ್ ಮದೀನಿ ಹಾಗೂ ಅನಸ್ ಮಾಡನ್ನೂರ್ “ಸ್ಟಾರ್ ಆಫ್ ದಿ ಫೆಸ್ಟ್” ಪ್ರಶಸ್ತಿಯನ್ನು ಪಡೆದರೆ, ಸ್ಟೇಜೇತರ ಕಾರ್ಯಕ್ರಮದಲ್ಲಿ ಮೇನಾಲ ಯುನಿಟ್ ನ ವಾಸಿಲ್ ಅಹ್ಮದ್ “ಪೆನ್ ಆಫ್ ದಿ ಫೆಸ್ಟ್” ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಯ್ಯದ್ ಝೈನುಲ್ ಆಬಿದೀನ್ ಮುತ್ತು ಕೋಯ ತಂಙಳ್ ಕಣ್ಣವಂ, SSF ಪುತ್ತೂರು ಡಿವಿಷನ್ ನಾಯಕರುಗಳು ಹಾಗೂ ಶ್ರೀರಾಮ್ ಪಕ್ಕಳ, ರಾಮ ಮೇನಾಲ, ರಮೇಶ್ ರೈ ಸಾಂತ್ಯ, ಮೂಸಾನ್ ಕರ್ನೂರು, ಎಸ್ ಕೆ ಎಸ್ ಎಸ್ ಎಫ್ ಮೇನಾಲ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮೇನಾಲ, ಯುವ ನಾಯಕರಾದ ತ್ವಾಹ ಬಿ.ಸಿ, ಯೂನುಸ್ ಪಟ್ರೋಡಿ ಮುಂತಾದ ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಿ ಶುಭ ಹಾರೈಸಿದರು.
ಸಮಾರೋಪ ಸಮಾರಂಭದಲ್ಲಿ ಮುಸ್ತಫ ಸಖಾಫಿ ಮೇನಾಲ ರವರು ದುಆ ನೆರವೇರಿಸಿದರು.ಪ್ರಾದೇಶಿಕ ಸ್ವಾಗತ ಸಮಿತಿ ಚಯರ್ಮೆನ್ ರಹೀಂ ಬಿ.ಸಿ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷರಾದ ಶಫೀಕ್ ಸಅದಿ ಈಶ್ವರಮಂಗಲ ಉದ್ಘಾಟಿಸಿದರು. ಈಸ್ಟ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿಯಾದ ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ, ಮಸ್ಜಿದ್ ಸ್ವಹಾಬ ಇಮಾಮರಾದ ತ್ವಾಹ ಸ ಅದಿ ಬಿ.ಸಿ ಹಿತನುಡಿಗಳನ್ನಾಡಿದರು. ವೇದಿಕೆಯಲ್ಲಿ ಖಾಲಿದ್ ಎಂ.ಎ, ತ್ವಾಹ ಪಿ.ಎಸ್ ಮೇನಾಲ, ಹಾರಿಸ್ ಪಿ.ಎಸ್ ಮೇನಾಲ, ಮೇನಾಲ ಯುನಿಟ್ ಅಧ್ಯಕ್ಷ ಸವಾದ್ ಯು.ಎಂ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್ಸೆಸ್ಸೆಫ್, ಕೆಸಿಎಫ್ ನಾಯಕರು ಉಪಸ್ಥಿತರಿದ್ದರು.
ಪ್ರಾದೇಶಿಕ ಸ್ವಾಗತ ಸಮಿತಿ ಕನ್ವೀನರ್ ಸಂಶುದ್ದೀನ್ ಹನೀಫಿ ಮೀನಾವು ಸ್ವಾಗತಿಸಿ ಸೆಕ್ಟರ್ ಅಧ್ಯಕ್ಷ ಸಿ.ಎಂ ಸಿದ್ದಿಕ್ ಹಾಶಿಮಿ ವಂದಿಸಿದರು. ಸಿನಾನ್ ಸಖಾಫಿ ಹಸನ್ ನಗರ ಕಾರ್ಯಕ್ರಮ ನಿರೂಪಿಸಿದರು.