ಪುತ್ತೂರು: ತುಳುನಾಡ ಗಾನ ಗಂಧರ್ವ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದ ಶ್ರೀ ಕೃಷ್ಣಾ ಜನ್ಮಾಷ್ಟಮಿಯ ವಿಶೇಷ ಭಕ್ತಿ ಗೀತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿರವರು ಬಿಡುಗಡೆಗೊಳಿಸಿದರು.
ಭಜನೆ ಹಾಗೂ ಕುಣಿತ ಭಜನಾ ತಂಡಗಳಿಗಾಗಿ ಹೊಸ ರಾಗ ಸಂಯೋಜನೆಯಲ್ಲಿ ಮೂಡಿ ಬಂದ ಶ್ರೀ ಕೃಷ್ಣ ಪರಮಾತ್ಮನ ಭಕ್ತಿಗೀತೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ತಂಡದಿಂದ ಮೂಡಿಬಂದಿದೆ.
ಹಾಡಿನ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಮತ್ತು ಗಾಯನ ಪುತ್ತೂರು ಜಗದೀಶ್ ಆಚಾರ್ಯ ಮಾಡಿದ್ದು, ಅವರೊಂದಿಗೆ ಗಾಯಕಿಯರಾಗಿ ಕಲಾವಿದೆಯರಾದ ಜನ್ಯ ಪ್ರಸಾದ್ ಅನಂತಾಡಿ, ಉಜ್ವಲ ಆಚಾರ್ ಮಂಕುಡೆ, ಸಾಹಿತ್ಯ ಆಚಾರ್ಯ ಭಾಗವಹಿಸಿದ್ದಾರೆ. ಈ ಭಕ್ತಿಗೀತೆ ವೀಡಿಯೋ ಆಲ್ಬಮ್ ನ ನಿರ್ಮಾಣವನ್ನು ಬಹರೈನ್ ನಲ್ಲಿರುವ ನವೀನ್ ಮಾವಜಿ , ಕಾವ್ಯ ನವೀನ್ ಮಾವಜಿಯವರು ಮಾಡಿದ್ದಾರೆ. ವಿಡಿಯೋ ಹಾಗೂ ಸಂಕಲನ ಶ್ರೀಟಾಕೀಸ್ ರವರದ್ದಾಗಿದೆ.
ಬಿಡುಗಡೆ ಸಮಾರಂಭದಲ್ಲಿ ಶ್ರೀ ದೇವಳದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಎಸ್ ಜೆ ಏಸುರಾಜ್, ದೇವಳದ ಅಭಿಯಂತರರು ಉದಯ್ ಕುಮಾರ್ ಕೆ ಸಿ ನಿರ್ಮಾಪಕರು ನವೀನ್ ಮಾವಜಿ ಮತ್ತು ಕಾವ್ಯಶ್ರೀ ನವೀನ್ ಮಾವಜಿ, ವ್ಯವಸ್ಥಾಪನ ಸಮಿತಿ ಸದಸ್ಯರು ಸೌಮ್ಯ ಭರತ್ ಮತ್ತು ಲೀಲಾ ಮನಮೋಹನ್, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ , ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ದೇವಳದ ಸಿಬ್ಬಂದಿಗಳಾದ ಮಹೇಶ್ ಕುಮಾರ್ ಎಸ್ ಮತ್ತು ಯೋಗೀಶ್ ಎಂ ಉಪಸ್ಥಿತರಿದ್ದರು.