ಪೆರಾಬೆ: ನೂರುಲ್ ಹುದಾ ಮದ್ರಸ ಕೋಚಕಟ್ಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮದ್ರಸ ಅಧ್ಯಕ್ಷರಾದ ಹಮೀದ್ ಅಜ್ಮೀರ್ ಧ್ವಜಾರೋಹಣ ನೆರವೇರಿಸಿದರು. ಫಾರೂಕ್ ದಾರಿಮಿ ದು:ಆ ನೇತೃತ್ವ ವಹಿಸಿದ್ದರು. ಕುಂತೂರು ಮಸೀದಿ ಉಪಾಧ್ಯಕ್ಷರಾದ ಅಬ್ಬಾಸ್ ಕೆಎಸ್ಆರ್ಟಿಸಿ, ಎಸ್ವೈಎಸ್ ಕುಂತೂರು ಯುನಿಟ್ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ, ಮದ್ರಸ ಮಾಜಿ ಅಧ್ಯಕ್ಷರಾದ ಬಶೀರ್ ಕೆ.ಪಿ., ಇಸ್ಮಾಯಿಲ್ ಅಲ್ಅಮೀನ್, ಅಬೂಬಕ್ಕರ್ ಡಿ.ಎಸ್., ಸಮಿತಿ ಸದಸ್ಯರಾದ ಲತೀಫ್ ಮಕ್ಬೂಲ್, ಆದಂ ಸಾಹೇಬ್, ನೌಷಾದ್ ಕಟ್ಲೇರಿ, ಅಶ್ರಫ್ ಎಂ.ಕೆ., ಉಮ್ಮರ್ ಪೊಸಳಿಗೆ, ಸಿದ್ದೀಕ್ ಅಲ್ ಅಮೀನ್ ಹಾಗೂ ಮದ್ರಸ ಸದಸ್ಯರುಗಳು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.