ಪುತ್ತೂರು: ಸಾಜ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬ್ ಹಾಫಿಳ್ ಉಮರುಲ್ ಫಾರೂಖ್ ಹಿಮಮಿ ಸಖಾಫಿ ಸಂದೇಶ ಭಾಷಣಗೈದರು. ಮದ್ರಸಾ ವಿಧ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು.

ಸ್ವಾತಂತ್ರ್ಯೋತ್ಸವಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಅಲ್ಲಿಂ ಅನೀಸ್ ಸಅದಿ, ಮಾಜಿ ಖತೀಬ್ ಅಬ್ಬಾಸ್ ಮುಸ್ಲಿಯಾರ್ಬುಪಾಧ್ಯಕ್ಷ ಇದ್ದಿನ್ ಕುಞ್ಞಿ ಹಾಜಿ, ಯಂಗ್ಮೆನ್ಸ್ ಅಧ್ಯಕ್ಷ ಆಶ್ರಫ್ ಎಚ್.ಎಸ್ ಸಹಿತ ಜಮಾಅತರು ಭಾಗವಹಿಸಿದ್ದರು.