ಪುತ್ತೂರು: ಮುಂಡೂರು ವಲಯ ಕಾಂಗ್ರೆಸ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್ ರಹಿಮಾನ್ ಹಾಜಿ ಮುಲಾರ್ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಲಯ ಮಹಿಳಾ ಅಧ್ಯಕ್ಷೆ ಕಾವ್ಯ ಸತೀಶ್ ಸಾಲಿಯಾನ್ ನಾಡಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ನಿವೃತ ಯೋಧ ಕ್ಯಾಪ್ಟನ್ ಚಿದಾನಂದ ನಾಡಾಜೆ ಅವನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ಗಣೇಶ್ ಬಂಗೇರ, ಪದ್ಮಯ್ಯ ಬಂಡಿಕಾನ, ಇಬ್ರಾಹಿಂ ಮುಲಾರ್, ಅಣ್ಣಿ ಪೂಜಾರಿ ಹಿಂದಾರ್,ಸುಲೈಮಾನ್ ಮುಲಾರ್, ಮಯಾಜ್ ಮುಲಾರ್, ಇಸ್ಮಾಯಿಲ್ ಕೊಂಬಳ್ಳಿ, ಅವಿನಾಶ್ ಕೊಡಂಕಿರಿ, ಜಯಾನಂದ ಆಳ್ವ ಪಟ್ಟೆ, ರಜಾಕ್ ಮುಲಾರ್, ಮುಫೀಜ್ ಮುಲಾರ್, ಅಣ್ಣಿ ಕೊರುಂಗು, ತಿಮ್ಮಪ್ಪ ನಾಯ್ಕ ಬಂಡಿಕಾನ, ಇಸಾಕ್ ಸಿಬರ, ಇಬ್ರಾಹಿಂ ಕೊಂಬಳ್ಳಿ, ಹನೀಫ್ ಬೀಟಿಗೆ, ರವಿ ಕುಮಾರ್ ನಾಡಾಜೆ, ಶಾಫಿ ಮುಂಡೂರು ಮತ್ತು ಮುಂಡೂರು ವಲಯ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ವಲಯ ಪ್ರಧಾನ ಕಾರ್ಯದರ್ಶಿ ಆಶ್ರಪ್ ಮುಲಾರ್ ವಂದಿಸಿದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.