ಸರ್ವೆ: ಸರಕಾರಿ ಪ್ರೌಢಶಾಲೆ ಕಲ್ಪಣೆ ಸರ್ವೆ 79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ದಿ ಸಮಿತಿ ಕಾರ್ಯಾದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅಧ್ಯಾಪಕಿ ಉಮಾವತಿ. ಎಲ್. ಸಂದೇಷ ಭಾಷಣ ಮಾಡಿದರು.ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಸಹದೇವ್ , ನಿಕಟ ಪೂರ್ವ ಕಾರ್ಯಾದ್ಯಕ್ಷರಾದ ಕರುಣಾಕರ್ ಗೌಡ ಎಲಿಯ , ರೆಂಜಲಾಡಿ ಜುಮಾ ಮಸೀದಿಯ ಧರ್ಮಗುರುಗಳಾದ ನಾಸಿರ್ ಫೈಝಿ ಶುಭ ಹಾರೈಸಿ ಮಾತನಾಡಿದರು.
ಹಲವಾರು ಸಂಘ ಸಂಸ್ಥೆಗಳ ನಾಯಕರಾದ ಸುಂದರ ಬಲ್ಯಾಯ , ಹಾರಿಸ್ ದರ್ಬೆ , ಇಸ್ಮಾಯಿಲ್ ಸುಲ್ತಾನ್ , ಬಾತಿಷಾ ಪರಾಡ್ , ಇಸಾಕ್ ರೆಂಜಲಾಡಿ , ಹುಸೈನ್ . ಆರ್., ಯಾಕೂಬ್ ರೆಂಡಲಾಡಿ , ಮಹಮ್ಮದ್ ಕಲ್ಪಣೆ , ರಹೀಂ ರೆಂಜಲಾಡಿ , ಸಲೀಂ ರೆಂಜಲಾಡಿ , ಹಸೈನಾರ್ ಕಲ್ಪಣೆ ಹಾಗು ಎಸ್. ಡಿ. ಎಂ. ಸಿ. ಸದಸ್ಯರಾದ ಅಝೀಝ್ ರೆಂಜಲಾಡಿ , ಶಾಂತಪ್ಪ ಕಡ್ಯ , ಅಬೂಬಕರ್ ಮುಸ್ಲಿಯಾರ್ ಅಧ್ಯಾಪಕರಾದ ವೆಂಕಟೇಷ್ , ಜಾರ್ಜ್ , ಕಾಂಚನಾ , ನಳಿನಿ , ಉಮೈರಾ ತಬಸ್ಸಂ ಉಪಸ್ಥಿತರಿದ್ದರು ,
ಅಧ್ಯಾಪಕರಾದ ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.