ಪುತ್ತೂರು : ಸರಕಾರಿ ಪ್ರೌಢ ಶಾಲೆ ಪಾಪೆಮಜಲಿನಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಿತು. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಹುಸೇನ್ ರವರು ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಹಾಗೂ ರಂಗಮಂದಿರ ನಿರ್ಮಾಣವಾಗಲಿದೆ ಎಂದರು. ನಿಕಟಪೂರ್ವ ಕಾರ್ಯಾಧ್ಯಕ್ಷರಾದ ತಿಲಕ್ ರೈಕುತ್ಯಾಡಿಯವರು ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸಿ ಶುಭ ಹಾರೈಸಿದರು. ವಿವೇಕಾನಂದ ಯುವಕ ವೃಂದ ಕೌಡಿಚಾರು ಇದರ ಅಧ್ಯಕ್ಷರಾಗಿರುವ ಉದಯ್ ಇವರು ಮಾತನಾಡಿ ಶುಭ ಹಾರೈಸಿದರು. ಸಂಸ್ಥೆಯ ಕನ್ನಡ ಶಿಕ್ಷಕರಾದ ಪೂರ್ಣಿಮಾ ಶೆಟ್ಟಿ ಇವರು ಸ್ವಾತಂತ್ರ್ಯೋತ್ಸವ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿಗಳಾದ ಎಂಟನೇ ತರಗತಿಯ ಲಾಸ್ಯ ಕನ್ನಡದಲ್ಲಿ ,10ನೇ ತರಗತಿಯ ಪ್ರಜ್ವಲ್ ಇಂಗ್ಲಿಷ್ ನಲ್ಲಿ, ಹಾಗೂ ಅಮೃತ್ ಹಿಂದಿಯಲ್ಲಿ ಸ್ವಾತಂತ್ರ್ಯ ಹೋರಾಟ , ಸ್ವಾತಂತ್ರ್ಯಾ ನಂತರದ ಭಾರತದ ಬಗ್ಗೆ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆಸಿದ ಗುಡ್ಡಗಾಡು ಓಟ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ತಾಲೂಕು ಹಂತಕ್ಕೆ ಆಯ್ಕೆಯಾದ 14ರ ವಯೋಮಾನದ ಲಾಸ್ಯ ಹಾಗೂ ಯಕ್ಷಿತಾ, 17ರ ವಯೋಮಾನದ ರಂಜಿತ್ ಶ್ರವಣ್ ಕುಮಾರ್ ಚರಿಷ್ಮಾ ಹಾಗೂ ತನ್ವಿ ಇವರಿಗೂ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಗುರುಗಳಾದ ಮೋನಪ್ಪ ಬಿ ಪೂಜಾರಿ, ನಿವೃತ್ತ ರೇಂಜರ್ ಸುಬ್ರಹ್ಮಣ್ಯ ಗೌಡ ದಾನಿಗಳಾದ ರಮೇಶ್ ಪರ್ಪುಂಜ ಶಿಕ್ಷಣ ತಜ್ಞರಾದ ದಶರಥ ರೈ ಕುತ್ಯಾಡಿ, ಎಸ್ ಡಿ ಎಂ ಸಿ ಸದಸ್ಯರಾದ ಹೊನ್ನಪ್ಪ ನಾಯ್ಕ ,ಚಂದ್ರ, ರೇವತಿ ಹಾಗೂ ಲೀಲಾವತಿ ಉಪಸ್ಥಿತರಿದ್ದರು ಬಹುಮಾನಿತರ ಪಟ್ಟಿಯನ್ನು 10ನೇ ತರಗತಿಯ ವಿನುತಾ, ಲಾವಣ್ಯ , ದೀಕ್ಷಾ ವಾಚಿಸಿದರು. ಹತ್ತನೇ ತರಗತಿಯ ಪಂಚಮಿ ಸ್ವಾಗತಿಸಿ ವರ್ಷ ಬಿ ವಂದಿಸಿದರು 9ನೇ ತರಗತಿಯ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು
ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು