ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ ಅವರು ಧ್ವಜಾರೋಹಣಗೈದರು. ಬಿ.ಎಸ್.ಎಫ್.ಹವಾಲ್ದಾರ ಶ್ರೀ ಭಾಸ್ಕರಗೌಡ, ಸಂಸ್ಥೆಯ ಕಾರ್ಯದರ್ಶಿಗಳಾದ ಮೋಹನ ಎ , ಸಂಸ್ಥೆಯ ಆಡಳಿತ ಅಧಿಕಾರಿಯಾದ ರಾಧಾಕೃಷ್ಣ ಎರುಂಬು, ಪ್ರಾಂಶುಪಾಲರಾದ ಜಯರಾಮ ರೈ, ಉಪ ಪ್ರಾಂಶುಪಾಲೆಯಾದ ಜ್ಯೋತಿ ಶೆಣೈ,ಶಾಲಾ ವಿದ್ಯಾರ್ಥಿ ನಾಯಕನಾದ ಮೋನಿಷ್.ಎಲ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ನ ಎಲ್ಲಾ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಸ್ವಾತಂತ್ರ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ಸಾಂಸ್ಕೃತಿಕ ವಿಭಾಗದ ಅಂಗವಾದ ” ಅಂಕುರ” ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಏಳನೇ ತರಗತಿಯ ವಿದ್ಯಾರ್ಥಿನಿಯರಾದ ಪಾವ್ನಿ ಜೆ.ವಿ.ಮತ್ತು ಮನೋಜ್ಞ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಪೃತ್ವಿಕ್ ಡಿ.ಟಿ ಮತ್ತು ಪ್ರತಿಜ್ಞಾ ಇವರು ವಿಜೇತರುಗಳ ಹೆಸರುಗಳನ್ನು ಓದಿದರು. ಖದಿಜತ್ ಜಝೀಲ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾನ್ವಿ ವಂದಿಸಿದರು. ಶಿಕ್ಷಕಿಯರಾದ ರೇಖಾ, ಸೆಲೆಸ್ಟಿನ್ ಪಿಂಟೊ ಮತ್ತು ಮಾನಸ.ಕೆ. ಎಸ್ .ಸಹಕರಿಸಿದರು.