ನಿಡ್ಪಳ್ಳಿ: ಇರ್ದೆ ಬೆಟ್ಟoಪಾಡಿ ಗ್ರಾಮೀಣ ವಲಯ ಕಾಂಗ್ರೆಸ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಐತಪ್ಪ ಪೇರಳ್ತಡ್ಕರವರ ಮನೆಯಲ್ಲಿ ಆಚರಿಸಲಾಯಿತು.
ಹಿರಿಯ ಕಾಂಗ್ರೆಸಿಗ ಮಾಧವ ಪೂಜಾರಿ ರೆಂಜ ಧ್ವಜಾರೋಹಣ ಗೈದರು, ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಮೊಯಿದು ಕುoಞ ಕೋನಡ್ಕ, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಅಬೂಬಕರ್ ಕೊರಿಂಗಿಲ,ಬೂತ್ ಅಧ್ಯಕ್ಷ ಸದಾಶಿವ ರೈ ಚೆಲ್ಯಡ್ಕ, ಯಾಕೂಬ್ ಕೂಟತ್ತಾನ, ದಾಮೋದರ ಪಾಟಾಳಿ, ಸುಂದರ ಗೊಳಿಪದವು,ಬಾಬು, ಸುರೇಶ, ಗಿರೀಶ .ಶ್ರೀಮತಿ ವಿನಯ ಇನ್ನಿತರರು ಭಾಗವಹಿಸಿದರು.