ಪುತ್ತೂರು: ಸುದಾನ ವಸತಿ ಶಾಲೆ ಮತ್ತು ಸುದಾನ ಪದವಿಪೂರ್ವ ಕಾಲೇಜುಗಳು ಜಂಟಿಯಾಗಿ 79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷೆ ಸಿಲ್ವಿಯಾ ಡಿ’ಸೋಜರವರು ಧ್ವಜಾರೋಹಣ ಮಾಡಿ ಶುಭ ಹಾರೈಸಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ವೀಕೃತಿ(10ನೇ) ದಿನದ ಮಹತ್ವವನ್ನು ವಿವರಿಸಿದರು. ಶಾಲಾ ಕೋಶಾಧಿಕಾರಿ ಆಸ್ಕರ್ ಆನಂದ್, ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್, ಶಾಲಾ ಆಡಳಿತ ಅಧಿಕಾರಿ ಸುಶಾಂತ್ ಹಾರ್ವಿನ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ ಸಿ, ಉಪ ಮುಖ್ಯ ಶಿಕ್ಷಕಿ ಲವೀನಾ ಹನ್ಸ್, ರೋಟರಿ ಎಲ್ಲೈಟ್ ಕಾರ್ಯದರ್ಶಿ ಶ್ರೀಮತಿ ಪದ್ಮಾವತಿ, ಅಬ್ದುಲ್ ರಝಾಕ್ , ಮೌನೇಶ್ ವಿಶ್ವಕರ್ಮ ಮುಂತಾದವರು ಉಪಸ್ಥಿತರಿದ್ದರು ವಿದ್ಯಾರ್ಥಿಗಳಾದ ಅಭಿಜ್ಞಾ(10)ಸ್ವಾಗತಿಸಿ, ನಿಹಾರಿಕಾ ಸಿ ಎಚ್(10) ವಂದಿಸಿದರು. ಇಶಾನ್ ಶೇಖ್ ಮತ್ತು ಶರ್ವಿನ ಶೆಟ್ಟಿ(10) ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ರೋಟರಿ ಎಲೈಟ್ ಸಂಸ್ಥೆಯು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಸುದಾನ ಸಂಸ್ಥೆಯ ಸಿಬ್ಬಂದಿ ವರ್ಗದವರಿಗಾಗಿ ಆಯೋಜಿಸಲಾಯಿತು. ಎಲ್ಲಾ ಕಾರ್ಯಕ್ರಮವನ್ನು ಶಾಲೆಯ ಸೋಶಿಯಲ್ ಕ್ಲಬ್ ಜಾಗೃತಿ ಮತ್ತು ರೋಟರಿ ಇಂಟರಾಕ್ಟ್ ಕ್ಲಬ್ಸ್ ಸ್ಪಂದನವು ಆಯೋಜಿಸಿತ್ತು ಸಂಘದ ನಿರ್ದೇಶಕರಾದ ಯೋಗಿತಾ ಕಿರಣ್ ಮತ್ತು ಅಶ್ವಿನಿ ನೇತೃತ್ವ ವಹಿಸಿದ್ದರು.