ಪುತ್ತೂರು: ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ ಮಠ ಪುಳಿತ್ತಡಿ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷರಾದ ಜಕಾರಿಯಾ ರವರು ನೆರವೇರಿಸಿದರು..

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾಭಿವೃಧ್ಧಿ ಸಮಿತಿ ಉಪಾಧ್ಯಕ್ಷರಾದ ಮಾಧವ ನಿಕಟಪೂರ್ವ ಅಧ್ಯಕ್ಷ ಯಾಧವ ಆರ್ತಿಲ, ಉಪ್ಪಿನಂಗಡಿ ಸಿ ಎ ಬ್ಯಾಂಕ್ ಅಧ್ಯಕ್ಷ ರಾದ ಸುನೀಲ ದಡ್ಡು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಕೇಶವ ರಂಗಾಜೆ, ವನಿತಾ ಕಜೆಕ್ಕಾರು,ಪಂಚಾಯತ್ ಮಾಜಿ ಉಪಾಧಕ್ಷರಾದ ಶಾಂಭವಿ ರೈ, ಮಯೂರ ಮಿತ್ರ ವೃಂದದ ಅಧ್ಯಕ್ಷರಾದ ವಿನೀತ್ ಅತ್ರಮಜಲು, ಕಜೆಕ್ಕಾರು ಅಂಬೇಡ್ಕರ್ ಸಮಿತಿಯ ರಾಜೇಶ್,ಕಜೆಕ್ಕಾರು ಸತ್ಯ ಸಾರಮಣಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿ.ಇ.ಓ, ಶಾಲಾ ಹಳೇ ವಿದ್ಯಾರ್ಥಿ ಅಶೋಕ ಗೌಡ, ಶಾಲಾ ಮುಖ್ಯ ಗುರುಗಳಾದ ಜೂಲಿಯಾನ ವಾಸ್, ಪುಳಿತ್ತಡಿ ಅಂಗನವಾಡಿ ಶಿಕ್ಷಕಿ ಚಂದ್ರಿಕಾ, ಶಾಲಾ ಹಳೇ ವಿದ್ಯಾರ್ಥಿ ಕಳಿಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕುಂಞ ಕಜೆಕ್ಕಾರು ಉಪಸ್ಥಿತರಿದ್ದರು. ಶಾಲಾ ಗೌರವ ಶಿಕ್ಷಕಿ ಶ್ವೇತಾ ಸ್ವಾಗತಿಸಿ, ಅತಿಥಿ ಶಿಕ್ಷಕರಾದ ರಮಣಿ, ಶ್ವೇತಾ, ಮೋಹಿನಿ ಸಹಕರಿಸಿದರು.