ಪುತ್ತೂರು: 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಕರ್ನೂರು ಶಾಲೆಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳೆಲ್ಲ ಶಿಸ್ತಿನ ಸಿಪಾಯಿಗಳಾಗಿ ಭಾಗವಹಿಸಿ ಇಂದಿನ ಮಹತ್ತರವಾದ ದಿನಕ್ಕೆ ಗೌರವ ಸಮರ್ಪಿಸಿದರು ಅಂತೆಯೇ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಿ ಹೆಚ್ ಸೂಫಿ ಇವರು ಧ್ವಜಾರೋಹಣವನ್ನು ನೆರವೇರಿಸಿ ಇಂದಿನ ಸ್ವಾತಂತ್ರ್ಯ ದಿನಾಚರಣೆ ಬರಿ ದಿನಾಚರಣೆ ಮಾತ್ರವಲ್ಲ ಇದು ನಮ್ಮ ಬದುಕು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ತಾವು ಮಾಡಬೇಕಾದ ಕರ್ತವ್ಯಗಳ ಕುರಿತು ಹಾಗೂ ನಾವದನ್ನು ಯಾವ ರೀತಿ ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಹೇಳಿದರು.
ಎಲ್ಲರ ಸಮ್ಮುಖದೊಂದಿಗೆ ಶಾಲೆಯಿಂದ ನೆರೋಲ್ತಡ್ಕ ಬಸ್ ನಿಲ್ದಾಣದವರೆಗೆ ಘೋಷಣೆಯೊಂದಿಗೆ ನಮ್ಮ ಮಕ್ಕಳ ಜಾಥಾ ಸಾಗಿತು, ಮಕ್ಕಳಿಗೂ ಸರ್ವರಿಗೂ ಸಿಹಿ ನೀಡಲಾಯಿತು.ಆ ನಂತರ ಮರಳಿ ಶಾಲೆಗೆ ಬಂದು ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಿ.ಹೆಚ್ ಸೂಫಿ , ಉಪಾಧ್ಯಕ್ಷರಾದ ಸಂಗೀತ ರೈ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ರೈ ಇವರು ಉಪಸ್ಥಿತರಿದ್ದರು.
ಮಕ್ಕಳ ಪೋಷಕರು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೌರವಾನ್ವಿತರನ್ನು ಶಾಲೆಯ ಮುಖ್ಯ ಗುರುಗಳಾದ ರಮೇಶ್ ಶಿರ್ಲಾಲ್ ಇವರು ಸ್ವಾಗತಿಸಿದರು ಹಾಗೂ ಕುಮಾರಿ ಭವ್ಯ ಇವರು ಧನ್ಯವಾದಗೈದರು .ಶ್ರೀಮತಿ ಪ್ರವೀಣ ಕುಮಾರಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಹಾಗೂ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಸಾವಿತ್ರಿ,ಕುಮಾರಿ ವಿಜೇತ ಕೆ.,ಶ್ರೀಮತಿ ಹಲೀಮ ನಜೀಮುನ್ನಿಸ ,ಶ್ರೀಮತಿ ಬಿಂದು ಕೆ ಎಸ್, ಶ್ರೀಮತಿ ಅಸ್ಮಾ ಕೆ.ಪಿ, ಕುಮಾರಿ ಸುಪ್ರೀತಾ ಕೆ,ಅಡುಗೆ ಸಿಬ್ಬಂದಿಯವರು,ಹಿರಿಯ ವಿದ್ಯಾರ್ಥಿಗಳು ,ಪೋಷಕರು, ಹಾಗೂ ಪುಟಾಣಿ ಮಕ್ಕಳು ಸಹಕರಿಸಿದರು.