ನಿಡ್ಪಳ್ಳಿ; ದ.ಕ.ಜಿ. ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಧ್ವಜಾರೋಹಣ ನೆರವೇರಿಸಿದರು.
ಬೆಟ್ಟಂಪಾಡಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರಸಾದ್,ಹಿರಿಯರಾದ ಸದಾಶಿವ ಭಟ್ ಪಾಲ್ತಮೂಲೆ, ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾಶಿವ ರೈ ಸೂರಂಬೈಲು,ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸ್ಕಂದ ಶ್ರೀ ಯುವಕ ಮಂಡಲ ತೂಂಬಡ್ಕ ಇದರ ಅಧ್ಯಕ್ಷ ಮೋಹನ ನಾಯ್ಕ ತೂಂಬಡ್ಕ, ಗ್ರಾಮ ಪಂಚಾಯತ್ ಸದಸ್ಯೆ ಸುಲೋಚನಾ,ಚೇತನಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ತೂಂಬಡ್ಕ,ಓಂ ಫ್ರೆಂಡ್ಸ್ ಕ್ಲಬ್ ಭರಣ್ಯ ಇದರ ಅಧ್ಯಕ್ಷ ವಸಂತ್ ಕುರೂಪ್, ತುಳುನಾಡ ಫ್ರೆಂಡ್ಸ್ ತೂಂಬಡ್ಕ ಅಧ್ಯಕ್ಷ ದಯಾನಂದ ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್ ವಹಿಸಿದ್ದರು. ಅತಿಥಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರಸಾದ್ ಸ್ವಾತಂತ್ರ್ಯದ ಹಿನ್ನೆಲೆ ಹಾಗೂ ಮಹತ್ವ ಕುರಿತು ಮಾತನಾಡಿದರು.ಶಾಲಾ ಮುಖ್ಯ ಗುರು ಊರ್ಮಿಳಾ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಶಿಕ್ಷಕಿ ಸುಪ್ರೀತ ಕಾರ್ಯಕ್ರಮ ನಿರೂಪಿಸಿದರು. ಸಲ ನಾಗೇಶ್ ಪಾಟಾಳಿ ಸ್ವಾಗತಿಸಿದರು.
ಸಹಶಿಕ್ಷಕಿ ಪವಿತ್ರ ಎಂ ಆರ್ ವಂದಿಸಿದರು.ಈ ಸಂದರ್ಭದಲ್ಲಿ ಚೇತನ ಹಿರಿಯ ವಿದ್ಯಾರ್ಥಿ ಸಂಘದ ಲಾಂಛನವನ್ನು ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಪ್ರದೀಪ್ ಪಾಣಾಜೆ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಏಳನೇ ತರಗತಿ ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಧನ್ಯಶ್ರೀ ಹಾಗೂ ದ್ವಿತೀಯ ಸ್ಥಾನ ಪಡೆದ ಬಿ ಜಿ ಚೇತನ್ ಇವರಿಗೆ ನಗದು ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಗೌರವ ಶಿಕ್ಷಕಿ ಯಶಸ್ವಿನಿ ಹಾಗೂ ವಿದ್ಯಾಲಕ್ಷ್ಮೀ ನಿರೂಪಣೆ ಮಾಡಿದರು. ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು.