ಬುಳೇರಿಕಟ್ಟೆ ಮಂಜ ಅನ್ಸ್ವಾರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಅನ್ಸ್ವಾರಿಯಾ ಜುಮಾ ಮಸ್ಜಿದ್, ಹಯಾತುಲ್ ಇಸ್ಲಾಂ ಮದ್ರಸ, ಬುಳೇರಿಕಟ್ಟೆ ಮಂಜ ಇಲ್ಲಿ 79ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಅಬ್ದುಲ್ ಹಕೀಮ್ ಧ್ವಜಾರೋಹಣ ನೆರವೇರಿಸಿದರು. ಜಮಾಅತ್ ಖತೀಬ್ ಮುಹಮ್ಮದ್ ಹನೀಫ್ ಅಸ್ಲಮಿ ಸೊರಕೆ ಪ್ರಾರ್ಥನೆ ನೆರವೇರಿಸಿ ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದಂತಹ ಧೀರ ಹೊರಟಗಾರರನ್ನು ಸ್ಮರಿಸಿದರು.


ಸ್ಥಳೀಯ ಪ್ರಧಾನ ಅಧ್ಯಾಪಕ ಮೂಸ ಫೈಝಿ ಸ್ವಾಗತಿಸಿ, ವಂದಿಸಿದರು. ಸಹ ಅಧ್ಯಾಪಕ ಅಬ್ದುಲ್ ಮಜೀದ್ ಇಮ್ದಾದಿ, ಜಮಾಅತ್ ಉಪಾಧ್ಯಕ್ಷ ಆಲಿ, ಕೋಶಾಧಿಕಾರಿ ಅಶ್ರಫ್ ನಡಿಮಾರ್, ವಿದ್ಯಾರ್ಥಿಗಳು, ಹಾಗೂ ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here