ಪುತ್ತೂರು:98 ವರ್ಷ ಇತಿಹಾಸವುಳ್ಳ ಬೊಳ್ವಾರು ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಸ್ಥಳೀಯ ನಗರಸಭಾ ಸದಸ್ಯರಾದ ಸಂತೋಷ್ ಕುಮಾರ್ ರವರು ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ರೇಷ್ಮಾ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಇದರ ರಾಯಭಾರಿ ಲ್ಯಾನ್ಸಿ ಮಸ್ಕರೇನ್ಹಸ್, ಕ್ಲಬ್ ನ ಅಧ್ಯಕ್ಷ ಅಂತೋನಿ ಒಲಿವೆರಾ , ಮಾತನಾಡಿ ಶುಭಾಶಯ ಹಾರೈಸಿದರು. ಹಸಿರು ಗಿಡ ಮರಗಳನ್ನು ನೆಟ್ಟು ನಮ್ಮ ಪರಿಸರವನ್ನು ಕಾಪಾಡಬೇಕು. ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಸೇರಿ ಸರ್ಕಾರಿ ಶಾಲೆಗಳನ್ನು ಆರ್ಥಿಕವಾಗಿ ಸದೃಢ ಗೊಳಿಸಲು ಕೈ ಕೈ ಜೋಡಿಸಿ ಮನಸ್ಸು ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ನೌಷದ್, ಪ್ರವೀಣ್ ನಾಯಕ್ ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ವತಿಯಿಂದ ಪದಕ ನೀಡಿ ಗೌರವಿಸಲಾಯಿತು. ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ.ಯ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಕ್ರೌನ್ಸ್ ನ ಕಾರ್ಯದರ್ಶಿ ಲೀನಾ ಮಚಾದೋ, ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ ಹಾಗೂ ಸದಸ್ಯರಾದ ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ನಿಶಾ ಮಿನೇಜಸ್, ಐವನ್ ಫೆರ್ನಾಂಡೀಸ್, ಅನಿತಾ, ಪ್ರಿಯಲತಾ ಡಿ’ಸಿಲ್ವ, ಲೆರಿಸ್ಸ ಪ್ರಿನ್ಸಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿ ಮೋದಿಕೇರ್ ದಯಾನಂದ, ಕಟ್ಟಡ ಕಾರ್ಮಿಕರ ಸಂಘ ಬೊಳುವಾರು, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ್ ನಾಯ್ಕ, ನಾಗೇಶ್ ಉರ್ಲಾಂಡಿ, ಲಯನ್ಸ್ ಕ್ಲಬ್ ಕ್ರೌನ್ಸ್ ಪುತ್ತೂರು ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾಭಿಮಾನಿಗಳಿಗೂ ಪೋಷಕರಿಗೂ ಬಾದಾಮಿ ಹಾಲು ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋನಿಕಾ ಪಿ. ಮಾಡ್ತಾ ಸ್ವಾಗತಿಸಿದರು. ಪದವೀಧರ ಪ್ರಾಥಮಿಕ ಶಿಕ್ಷಕಿ ಶ್ರೀಮತಿ ಮಲ್ಲಿಕಾ.ಬಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಸಹಶಿಕ್ಷಕಿ ಶ್ರೀಮತಿ ಭಾರತಿ ಸಹಕರಿಸಿದರು.