ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಕೂರ್ನಡ್ಕದಲ್ಲಿ 79ನೇ ಸ್ವಾತಂತ್ರೋತ್ಸವ ಆಚರಣೆ ಪ್ರಯುಕ್ತ ಆಟೋ ರ್ಯಾಲಿ ಮತ್ತು ದ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಆಟೋ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಆಸೀಫ್ ಮುಕ್ವೆ ದ್ವಜಾರೋಹಣಗೈದರು.
ಸಂದೇಶ ಬಾಷಣ ಮಾಡಿದ SDTU ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಸಾಲ್ಮರರವರು,ಶ್ರಮ ಪಟ್ಟು ಬದುಕು ಸಾಗಿಸುವ ಆಟೋ ಚಾಲಕರು ಸಂಭ್ರಮದಲ್ಲಿ ದೇಶ ಪ್ರೇಮದಿಂದ ಸ್ವಾತಂತ್ರ್ಯ ಆಚರಣೆ ಆಯೋಜಿಸುತ್ತಿರುವುದನ್ನು ಶ್ಲಾಘಿಸಿದರು ಮಾತ್ರವಲ್ಲ ಸ್ವಾತಂತ್ರ್ಯ ಭಾರತದ ಸಂವಿಧಾನ ಎಲ್ಲಾ ವರ್ಗದ ಜನರನ್ನು ಒಂದುಗೂಡಿಸಿ ಸಹೋದರತೆಯಿಂದ ಸಮಾನತೆಯಿಂದ ಬದುಕಲು ಅವಕಾಶ ನೀಡಿರುವಾಗ ಅದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಕಟ್ಟಿಬದ್ದಾರಾಗಬೇಕು ಎಂದು ಹೇಳಿದರು. ಕೂರ್ನಡ್ಕ ಫೀರ್ ಮೊಹಲ್ಲಾ ಜುಮ್ಮಾ ಮಸೀದಿ ಕೋಶಾಧಿಕಾರಿಗಳಾದ ಹಾಜಿ ರಿಯಾಜ್ ಭೂಮಿ, SDTU ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅದ್ದು ಕೊಡಿಪ್ಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಪುತ್ತೂರು ಬೈಪಾಸ್ ದರ್ಬೆ ದುಗ್ಗಣ್ಣ ದೇರಣ್ಣ ಕಲ್ಯಾಣ ಮಂಟಪ ಬಳಿಯಿಂದ ದರ್ಬೆ ಜಂಕ್ಷನ್ ಮುಖಾಂತರ ಕೂರ್ನಡ್ಕ ಜಂಕ್ಷನ್ ವರೆಗೆ ಆಟೋ ರ್ಯಾಲಿ ನಡೆಯಿತು.ಆಟೋ ಚಾಲಕರ ಯುನಿಯನ್ ಪುತ್ತೂರು ತಾಲೂಕು ಸಮಿತಿ ಕೋಶಾಧಿಕಾರಿ ಅಸಿಫ್ ಉಪ್ಪಿನಂಗಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.