ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ರಾಮಕುಂಜ: ಸ.ಹಿ.ಪ್ರಾ. ಶಾಲೆ ರಾಮಕುಂಜ ಇಲ್ಲಿ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಜಕರಿಯ ಮುಸ್ಲಿಯಾರ್ ನೆರವೇರಿಸಿದರು. ನಂತರ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಂದ ಮೆರವಣಿಗೆ ನಡೆಯಿತು.


ಎಸ್.ಡಿ.ಎಂ.ಸಿ ಅಧ್ಯಕ್ಷ ಜಕರಿಯ ಮುಸ್ಲಿಯಾರ್‌ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ದೀಪ ಪ್ರಜ್ವಲಿಸಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸೈನಿಕ ಚಿತ್ತರಂಜನ್ ಶೆಟ್ಟಿ ಶುಭಹಾರೈಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಕನ್ಯಾ ವಿಜೇಂದ್ರನ್, ಸದಸ್ಯರಾದ ಅಬ್ದಲ್ ಕರೀಂ ಹೇಂತಾರು, ಅಹಮ್ಮದ್ ಕುಂಞ, ಜಮೀಳ ಉಪಸ್ಥಿತರಿದ್ದರು.

ಪದವೀಧರ ಶಿಕ್ಷಕಿ ರಾಜಶ್ರೀ ನಿರೂಪಿಸಿದರು. ಮಖ್ಯಗುರು ಮಹೇಶ ಎಂ.ಸ್ವಾಗತಿಸಿದರು. ಜಾನಕಿ ಪಿ.ವಂದಿಸಿದರು. ಶಿಕ್ಷಕರಾದ ವಿಮಲ, ಜ್ಯೋತಿ ಬಾಯಿ ಎಸ್. ಹಾಗೂ ಅತಿಥಿ ಶಿಕ್ಷಕಿ ಉಷಾ ಸಹಕರಿಸಿದರು.

LEAVE A REPLY

Please enter your comment!
Please enter your name here