ಪುತ್ತೂರು: ಕನ್ನಡ ಫಿಲಂ ಚೇಂಬರ್ ಬೆಂಗಳೂರು ಇದರ ವತಿಯಿಂದ ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈಯವರಿಗೆ ರಾಜ್ಯ ಮಟ್ಟದ ಯಕ್ಷ ಕಲಾಸೇವಾ ರತ್ನ ಪ್ರಶಸ್ತಿಯನ್ನು ಆ.17ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರದ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಕಡಬ ಶ್ರೀನಿವಾಸ ರೈಯವರಿಗೆ ಈ ಹಿಂದೆ ಜಿಲ್ಲಾ ರಾಜ್ಯೋತ್ಸವ, ಆರ್ಯಭಟ ಪ್ರಶಸ್ತಿಯೂ ದೊರೆತಿದೆ.