ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಪುತ್ತೂರು ಮೂಲದ ಪಾಂಡುರಂಗ ನಾಯಕ್ ಯಾನೆ ಅಣ್ಣು ಮಾಮ್ (86ವ) ಅವರು ಆ.18 ರಂದು ಬೆಂಗಳೂರು ಮಗನ ಮನೆಯಲ್ಲಿ ನಿಧನರಾಗಿದ್ದಾರೆ.
ಪುತ್ತೂರು ಕೋರ್ಟ್ ರಸ್ತೆಯ ಬಳಿ ಜನರಲ್ ಮರ್ಚಂಟ್ ಆಗಿದ್ದ ಪಾಂಡುರಂಗ ನಾಯಕ್ ಅದೇ ಪರಿಸರದಲ್ಲಿ ವಾಸ್ತವ್ಯ ಹೊಂದಿದ್ದರು. ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಜನ ಸಂಘ ಮತ್ತು ಸಂಘ ಪರಿವಾರದ ಬೇರೆ ಬೇರೆ ಸಂಘಟನೆಯಲ್ಲಿ ಭಾಗವಹಿಸಿದ ಅವರು ಆರಂಭದ ಕಾಲದಲ್ಲಿ ವಿಕ್ರಮ ಪತ್ರಿಕೆಯ ವಿತರಕರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಅವರು ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.