ಪುತ್ತೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಆ.27ರಂದು ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬಾಲಸುಬ್ರಹ್ಮಣ್ಯ ಸಭಾಭವನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 29ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಕಾರ್ಯಕ್ರಮ ಜರಗಲಿರುವುದು.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಿಜಯಕುಮಾರ್ ಸೊರಕೆ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಗಂಗಾಧರ ಅಂಬುಲ, ಉಪಾಧ್ಯಕ್ಷ ರಾಘವ ಕೆಳಗಿನಕೇರಿ, ಕಾರ್ಯದರ್ಶಿ ಸಂದೇಶ ಅಂಬುಲ, ಜೊತೆ ಕಾರ್ಯದರ್ಶಿ ದಿನೇಶ್ ಕುಕ್ಕುನಡ್ಕ,ಕೋಶಾಧಿಕಾರಿ ಪದ್ಮನಾಭ ಅಂಬುಲ, ಗೌರವ ಸಲಹೆಗಾರರಾದ ಚಂದ್ರಕಲಾ ಜಯರಾಮ್ ಅರುವಗುತ್ತು, ಯು.ಪಿ ರಾಮಕೃಷ್ಣ ಗೌಡ, ವೆಂಕಪ್ಪ ಗೌಡ ಮಾಚಿಲ, ನೇಮಣ್ಣ ಗೌಡ ಅಂಬುಲ, ಪ್ರವೀಣ್ ಕುಂಟ್ಯಾನ, ಲಿಂಗಪ್ಪ ಗೌಡ ಅಂಬುಲ, ಧರ್ಣಪ್ಪ ಗೌಡ ಅಂಬುಲ, ಶೇಖರ ಗೌಡ ಅಂಬುಲ, ವಿಶ್ವನಾಥ ಅಂಬುಲ ಹಾಗೂ ವಿಜಿತ್ ಮಾಚಿಲ, ಗೌರೀಶ್ ಕುಂಬ್ಲಾಡಿ, ಜಯಾನಂದ ಕುಕ್ಕುನಡ್ಕ, ಅರ್ಚಕ ನೂತನ್ ಭಟ್, ಪುರಂದರ ಅಂಬುಲ, ಮೋನಪ್ಪ ಕುಂಬ್ಲಾಡಿ, ಎ.ಪಿ ಮೋಹನ ಅರುವ ಉಪಸ್ಥಿತರಿದ್ದರು.