ಪುಣಚ: ಪುಣಚ ಗ್ರಾಮದ ಕೃಷ್ಣಗಿರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಗೂ ನೂತನ ಶಾಲಾ ಪ್ರವೇಶ ದ್ವಾರದ ಉದ್ಘಾಟನಾ ಕಾರ್ಯಕ್ರಮ ಆ.15ರಂದು ನಡೆಯಿತು.
ಶಾಲಾ ಹಳೆ ವಿದ್ಯಾರ್ಥಿಗಳು ಸ್ಥಳೀಯ ಹಾಗೂ ಪರ ಊರಿನ ದಾನಿಗಳ ಸಹಕಾರದಿಂದ ನಿರ್ಮಿಸಲಾದ ಪ್ರವೇಶದ್ವಾರವನ್ನು ಸ್ಥಳೀಯ ದಾನಿಗಳಾದ ಕೋಡಂದೂರು ಸುರೇಂದ್ರ ರೈ ಅವರ ಪರವಾಗಿ ಸಹೋದರ ಸುಬೋಧ್ ರೈ ನಳಿನಾಕ್ಷಿ ದಂಪತಿಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕೋಡಂದೂರು ವಿಶ್ವನಾಥ ರೈ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ್ ಗೌಡ, ಉಪಾಧ್ಯಕ್ಷೆ ಜಯಂತಿ ಎನ್, ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಎಂ, ಶಿಕ್ಷಕರಾದ ಕವಿತಾ ನಾಯಕ್, ಶೃತಿ, ಪ್ರಮಿತಾ, ರೇಷ್ಮಾ, ಎಸ್.ಡಿ.ಎಂ.ಸಿ ಸದಸ್ಯರು,ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.