ಪೂರ್ಲಪ್ಪಾಡಿ: 23ನೇ ವರ್ಷದ ಮೊಸರು ಕುಡಿಕೆ ಉತ್ಸವ

0

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ , ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ  ಪೂರ್ಲಪ್ಪಾಡಿ  ಇದರ ಸಹಯೋಗದಲ್ಲಿ 23ನೇ ವರ್ಷದ ಮೊಸರು ಕುಡಿಕೆ ಉತ್ಸವವು ಪೂರ್ಲಪ್ಪಾಡಿ ಶ್ರೀವರ ವೇದಿಕೆ ಮುಂಭಾಗದಲ್ಲಿ ನಡೆಯಿತು.

ಹಿರಿಯರಾದ  ಮಾಯಿಲಪ್ಪ ಗೌಡ ತೋಟದಮನೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಾಯಂಕಾಲ ನಡೆದ  ಬಹುಮಾನ ವಿತರಣಾ ಸಮಾರಂಭದಲ್ಲಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷರಾದ   ರವೀಶ್ ಶೆಟ್ಟಿ ಕರ್ಕಳರವರು ಅಧ್ಯಕ್ಷತೆ ವಹಿಸಿದ್ದರು.

ವಿಟ್ಲ ಪಡ್ನೂರು ಗ್ರಾ. ಪಂ. ಅಧ್ಯಕ್ಷರಾದ ಜಯಂತ್ ಪೂರ್ಲಪ್ಪಾಡಿ , ಮೂರ್ಖಜೆ ಮೈತ್ರೆಯಿ ಗುರುಕುಲದ ರಮೇಶ್, ರಾಜೇಶ್ ಪಿ ಆರ್ ಹೊಸಮನೆ ಪೂರ್ಲಪ್ಪಾಡಿ,  ಜಗದೀಶ್ ರೈ ಪನಡ್ಕ , ವಕೀಲರು, ನೋಟರಿ ರಾಮಣ್ಣ ಗೌಡ ದೇವರಮನೆ, ರೋಹಿತ್ ರೈ ಚೆಂಬರಡ್ಕ, ಸಮಿತಿ ಗೌರವಾಧ್ಯಕ್ಷ ಈಶ್ವರ್ ಭಟ್ ಪೂರ್ಲಪ್ಪಾಡಿ,  ಸಮಿತಿ ಅಧ್ಯಕ್ಷ  ಸೇಸಪ್ಪ ಗೌಡ ಕೆಳಗಿನಮನೆ,  ಗ್ರಾಮ ಪಂ. ಸದಸ್ಯೆ  ಜಯಲಕ್ಷ್ಮೀ ಕೆ, ಶ್ರೀವರ ಯುವಕ ಮಂಡಲ ಅಧ್ಯಕ್ಷರಾದ ನಾರಾಯಣ ಗೌಡ  ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ಹತ್ತನೇ ಮತ್ತು 12ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಮಾಲವಿ ಯತೀಶ್ ಪ್ರಾರ್ಥಿಸಿದರು.  ಜಯಂತ್ ಸ್ವಾಗತಿಸಿದರು.  ವಿಜಯ ಪಿ, ಸಂತೋಷ್ ಪಿ, ಪ್ರಶಾಂತ್ ಪಿ, ಯೋಗೀಶ್ ಪಿ , ಪ್ರಜೇಶ್ ಕೆ, ಬಹುಮಾನ ವಿತರಣೆಯಲ್ಲಿ ಸಹಕರಿಸಿ, ವಿಶಾಕ್ ಕೆ. ವರದಿ ಮಂಡಿಸಿ, ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಸಭಾ ಕಾರ್ಯಕ್ರಮದ ಬಳಿಕ ಊರವರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಿರು ನಾಟಕ ನಡೆಯಿತು.

LEAVE A REPLY

Please enter your comment!
Please enter your name here