ಪುತ್ತೂರು: . ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್ ಹಾಸ್ಟೆಲ್ ಮಂಗಳೂರು ಇವರ ಆಶ್ರಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಮಹಿಳಾ ಬಂಟರ ವಿಭಾಗ ತಂಡ ತ್ರೋಬಾಲ್ ನಲ್ಲಿ ಎರಡನೇ ಬಾರಿಗೆ ಪ್ರಥಮ ಸ್ಥಾನ ಪಡೆದುಕೊಂಡು ಅತ್ಯುತ್ತಮ ವಿಜಯೀ ತಂಡವಾಗಿ ಮೂಡಿಬಂದಿದೆ. ಮಹಿಳಾ ಬಂಟರ ವಿಭಾಗದ ನಿಕಟಪೂರ್ವ ಅಧ್ಯಕ್ಷೆ ಸಬಿತಾ ಭಂಡಾರಿ ಮತ್ತು ಸಯಂ ಕ್ರೀಡಾಪಟು ಆಗಿರುವ ಸ್ವರ್ಣಲತಾ ಜೆ ರೈ ಯವರ ನೇತೃತ್ವದಲ್ಲಿನ ತಂಡ ಆಲ್ ರೌಂಡರ್ ಆಟಗಾರ್ತಿ ರೇಖಾ ರೈ ಯ ಆಟ ಮತ್ತು ತಂಡದ ಸದಸ್ಯರಾದ ಶ್ವೇತಾ ರೈ, ಕುಷಿ ರೈ, ದೀಕ್ಷಾ ರೈ, ಅವನಿ ರೈ, ತನಿಷಾ ರೈ, ಯಶ್ವಿ ರೈ, ವೈಷ್ಣವಿ ರೈ, ಸಾರಿಕಾ ರೈ, ರಮಾಕಾಂತಿ ರೈಯವರ ಸಂಘಟಿತ ಪ್ರಯತ್ನದಿಂದ ಈ ಗೆಲುವು ಸಾಧಿಸಿದೆ.
ಈ ಹಿಂದೆ ಇದೇ ತಂಡ ವಿಶ್ವ ಬಂಟರ ಕ್ರೀಡಾ ಕೂಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಕಳೆದ ವರ್ಷ ಮಂಗಳೂರಿನ ಮಾತೃ ಸಂಘದ ಗಣೇಶೋತ್ಸವದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ್ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಮತ್ತು ಶ್ರೀರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ರೈ ಇವರುಗಳು ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿದ್ದರು.

ಅಭಿನಂದನೆ
ಆ.17ರಂದು ಕೈಕಾರದಲ್ಲಿ ಜರಗಿದ ತಾ. ಬಂಟರ ಸಂಘದ ಆಶ್ರಯದ ಬಂಟೆರೆ ಕೆಸರ್ಡ್ ಒಂಜಿ ಕುಸಲ್ ಕಾರ್ಯಕ್ರಮಕ್ಕೆ ಆಗಮಿಸಿದ ಕ್ರೀಡಾಪಟುಗಳನ್ನು ವಾದ್ಯಘೋಷದೊಂದಿಗೆ ಸ್ವಾಗತಿಸಿ ಗೌರವಿಸಿ, ಸನ್ಮಾನಿಸಲಾಯಿತು. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೊಶಾಧಿಕಾರಿ ಸಂತೋಷ್ ಶೆಟ್ಟಿ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿರವರುಗಳು ಉಪಸ್ಥಿತರಿದ್ದರು.