ಪೆರಾಬೆ: ರಂಗಭೂಮಿ ಕಲಾವಿದ ಎ.ಎಸ್.ದಯಾನಂದ ಕುಂತೂರು ಅವರು ರಂಗಭೂಮಿಯಲ್ಲಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಕನ್ನಡ ಫಿಲಂ ಚೇಂಬರ್ ವತಿಯಿಂದ ಆ.17ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾ ಸೇವಾರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಎಂ.ಎಸ್.ರವೀಂದ್ರ, ಉಪಾಧ್ಯಕ್ಷ ಡಾ.ಎನ್.ಎನ್.ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ, ಖಜಾಂಜಿ ಆರ್ಯನ್ ರೆಡ್ಡಪ್ಪ, ನಿರ್ದೇಶಕ ಡಾ.ವಿಜಯ್ ಎಸ್.ಅಗಡಿ ಮತ್ತಿತರರು ಉಪಸ್ಥಿತರಿದ್ದರು.