ಕುಟುಂಬದಲ್ಲಿ ಮಕ್ಕಳನ್ನು ಸಂಸ್ಕಾರ ಕೊಟ್ಟು ಬೆಳೆಸುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿರುತ್ತದೆ – ಡಾ.ಅಬೂಬಕರ್ ಹಾಜಿ ಆರ್ಲಪದವು
ಪುತ್ತೂರು: ಕುಟುಂಬದಲ್ಲಿ ಮಕ್ಕಳನ್ನು ಸಂಸ್ಕಾರ ಕೊಟ್ಟು ಬೆಳಸುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿರುತ್ತದೆ. ಒಂದು ಮಗುವಿಗೆ ಸಂಸ್ಕಾರ ಕೊಟ್ಟರೆ ಇಡೀ ಸಮಾಜ ಸಂಸ್ಕಾರ ಪಡೆಯುತ್ತದೆ ಅಂತಹ ಸಂಸ್ಕೃತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ ಎಂದು ಸಂಪನ್ಮೂಲ ವ್ಯಕ್ತಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹಾಜಿ.ಎಸ್.ಅಬೂಬಕರ್ ಆರ್ಲಪದವು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂತೃಪ್ತಿ ಜ್ಞಾನ ವಿಕಾಸ ಕೇಂದ್ರ ಪಾಣಾಜೆ ಇದರ ಆಶ್ರಯದಲ್ಲಿ ಅನುಗ್ರಹ ಸಂಘದ ನೇತೃತ್ವದಲ್ಲಿ ಆ.19ರಂದು ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಹಿಳೆಯರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರ ಮತ್ತು ವಿದ್ಯೆಯನ್ನು ತಾಯಂದಿರು ಹೆಚ್ಚಾಗಿ ಕಲಿಸಬೇಕಾಗಿದೆ. ಹೆಣ್ಣೊಬ್ಬಳು ಕಲಿಯೋದು ಎಷ್ಟು ಮುಖ್ಯವೋ ಆಕೆ ಸಂಸ್ಕಾರಯುತವಾಗಿ ಸಂಸ್ಕೃತಿಯನ್ನು ಅಳವಡಿಸಿಕೊಂಡು ಹೋಗೋದು ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು. ಅನುಗ್ರಹ ಸಂಘದ ಅಧ್ಯಕ್ಷೆ ಹರಿಣಿ ತೂಂಬಡ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಕುಮಾರಿ ಕಾವ್ಯಶ್ರೀ ರಂಗೋಲಿ, ಭಜನೆ , ಸಾವಯವ ತರಕಾರಿ, ಕೈ ತೋಟ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು ಸೇವಾ ಪ್ರತಿನಿಧಿ ಜಯಶ್ರೀ ದೇವಸ್ಯ , ವಿಎಲ್ಇ ರಶ್ಮಿ ಕೇಂದ್ರ ಸಂಯೋಜಕಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು ಚಿಗುರು ಸಂಘ, ಸಮೃದ್ಧಿ ಸಂಘ, ಅಮೃತ ಸಂಘ , ಅನುಗ್ರಹ ಸಂಘದ ಸದಸ್ಯರು ಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಕುಸುಮ ಸ್ವಾಗತಿಸಿ, ವಸಂತಿ ವಂದಿಸಿದರು . ಪ್ರೇಮ ಕಾರ್ಯಕ್ರಮ ನಿರೂಪಣೆ ಮಾಡಿದರು