ಕುಂತೂರು ಶ್ರೀ ಶಾರದಾ ಶಿಶುಮಂದಿರದಲ್ಲಿ ಮೂರನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ

0

ಬಣ್ಣ ಬಣ್ಣದ ರಾಧಾಕೃಷ್ಣರ ಉಡುಪಿನಲ್ಲಿ ಸಭಿಕರನ್ನು ರಂಜಿಸಿದ ಪುಟಾಣಿಗಳು

ಕುಂತೂರು: ಸ್ಥಳೀಯ ಪುಟಾಣಿಗಳಿಗೆ ಸಂಸ್ಕಾರಯುಕ್ತ ಶಿಕ್ಷಣವನ್ನು ನೀಡಿ ಪುಟಾಣಿಗಳಲ್ಲಿ ದೇಶಭಕ್ತಿಯನ್ನು ಮೂಡಿಸುವ ಶಿಕ್ಷಣವನ್ನು ನೀಡುತ್ತಿರುವ ಕುಂತೂರು ಶ್ರೀ ಶಾರದಾ ಶಿಶುಮಂದಿರದಲ್ಲಿ ಆ.16ರಂದು ಮೂರನೇ ವರ್ಷದ ಶ್ರೀ ಕೃಷ್ಣ ಲೋಕ ಕಾರ್ಯಕ್ರಮ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.


ಕೃಷ್ಣನು ತನ್ನವರಿಗೆ ಬೆಳಕನ್ನು ತೋರಿಸಿ ತಾನೂ ಬೆಳಕು ಕಂಡ. ಅದೇ ರೀತಿಯ ಗುಣಗಳನ್ನು ನಾವು ಕೂಡ ಬೆಳೆಸಿಕೊಳ್ಳಬೇಕೆಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಮಾತನಾಡಿದ ಶ್ರೀ ದುರ್ಗಾಂಬಾ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಅಕ್ಷತಾ ಶೇಖರ್ ರವರು ಹೇಳಿದರು. ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸುಜಿತ್ ಕುಂಡಡ್ಕರವರು ಮಾತನಾಡಿ, ರಕ್ಷಾ ಬಂಧನ ಕಾರ್ಯಕ್ರಮದ ಮಹತ್ವದ ಕುರಿತು ತಿಳಿಸಿಕೊಟ್ಟರು.


ಬಣ್ಣ ಬಣ್ಣದ ಪೋಷಾಕಿನೊಂದಿಗೆ ರಾಧಾಕೃಷ್ಣರಾಗಿ ಮಿಂಚಿದ ಶಿಶುಮಂದಿರದ ಪುಟಾಣಿಗಳು, ಶ್ರೀ ಶಾರದಾ ಶಿಶು ಮಂದಿರದಿಂದ ಶ್ರೀ ಶಾರದಾ ಭಜನಾ ಮಂದಿರದವರೆಗೆ ಕುಣಿತ ಭಜನಾ ತಂಡದೊಂದಿಗೆ ಶೋಭಾ ಯಾತ್ರೆ ತೆರಳಿದರು. ಶಿಶುಮಂದಿರದಲ್ಲಿ ಮಕ್ಕಳಿಂದ ಮೊಸರು ಕುಡಿಕೆ ಉತ್ಸವ ನಡೆಸಲಾಯಿತು. ಶ್ರೀ ಬಾಲಕೃಷ್ಣನ ತೊಟ್ಟಿಲ ಸಂಭ್ರಮದ ನಂತರ ಶಿಶುಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಶಿಶುಮಂದಿರದ ಸಮಿತಿಯ ಅಧ್ಯಕ್ಷರು,ಸದಸ್ಯರು, ಮಾತೃ ಮಂಡಳಿಯ ಅಧ್ಯಕ್ಷರು, ಮಾತೆಯರು, ಸಾರ್ವಜನಿಕರು ಹಾಗೂ ಶಿಶುಮಂದಿರದ ಮಾತಾಜಿ ವರ್ಗದವರು ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳನ್ನು ಶ್ರೀ ಶಾರದಾ ಶಿಶುಮಂದಿರದ ಅಧ್ಯಕ್ಷೆ ಮಧುಶ್ರೀ ಅಗತ್ತಾಡಿ ಅವರು ಸ್ವಾಗತಿಸಿದರು. ಶಿಶು ಮಂದಿರದ ಕೋಶಾಧಿಕಾರಿ ಯಮುನಾ ಎಸ್ ರೈ ವಂದಿಸಿದರು. ಸಮಿತಿಯ ಕಾರ್ಯದರ್ಶಿ ಚೇತನ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here