ಉಪ್ಪಿನಂಗಡಿ: ನೋಂದಾಯಿತ ದ.ಕ. ಜಿಲ್ಲಾ ಅಡಿಕೆ ವರ್ತಕರ ಸಂಘ ರಚಿಸಿ ಅದರಲ್ಲಿ ಅಡಿಕೆ ವರ್ತಕರ ಎಲ್ಲಾ ಸಂಘಗಳನ್ನು ಒಗ್ಗೂಡಿಸುವ ಪ್ರಯತ್ನಗಳು ನಡೆಯುತ್ತಿದ್ದು, ಉಪ್ಪಿನಂಗಡಿ ವಲಯ ಅಡಿಕೆ ವರ್ತಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಅಧ್ಯಕ್ಷರಾಗಿ ಮಾತಾ ಸುಫಾರಿಯ ಸಚಿನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಕೋಡಿಂಬಾಡಿ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಆರ್.ಕೆ. ಟ್ರೇಡರ‍್ಸ್‌ನ ಹನೀಫ್, ನೆಲ್ಯಾಡಿ ಎ1 ಸುಫಾರಿಯ ಅಶ್ರಫ್, ಜೊತೆ ಕಾರ್ಯದರ್ಶಿಯಾಗಿ ನೌಫಲ್, ಖಜಾಂಚಿಯಾಗಿ ಪವಿತ್ರ ಸುಫಾರಿಯ ಅನೀಶ್ ಅವರನ್ನು ಆಯ್ಕೆ ಮಾಡಲಾಯಿತು.
ನೋಂದಾಯಿತ ದ.ಕ. ಜಿಲ್ಲಾ ಅಡಿಕೆ ವರ್ತಕರ ಸಂಘ ರಚಿಸಿ, ಸಂಘವನ್ನು ಬಲವರ್ಧನೆಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಅಲಿಮಾರ್ ರೈ ಟ್ರೇಡರ‍್ಸ್‌ನ ರೂಪೇಶ್ ರೈ, ಅಡಿಕೆ ವರ್ತಕರಾದ ಪ್ರಶಾಂತ್ ಶೆಟ್ಟಿ ಮಡಂತ್ಯಾರು, ಬಾಲಕೃಷ್ಣ ಆಳ್ವ ಕಲ್ಲಡ್ಕ, ಜಲೇಶ್ ಜೀವನಿ ಕಲ್ಲಡ್ಕ, ಸಂದೀಪ್ ಶೆಟ್ಟಿ ಮಡಂತ್ಯಾರು, ಹೇಮಂತ್‌ಕರ್ ಶೆಟ್ಟಿ ಬೆಳ್ತಂಗಡಿ, ರಹೀಂ, ಹಕೀಂ, ಸಂಶುದ್ದೀನ್ ಅವರ ನೇತೃತ್ವದಲ್ಲಿ ಈಗಾಗಲೇ ಪುತ್ತೂರು, ಕಡಬ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಹಾಗೂ ಮಂಗಳೂರಿನಲ್ಲಿ ಸಭೆಗಳು ನಡೆದು ಜಿಲ್ಲಾ ಸಂಘಕ್ಕೆ ಇಲ್ಲಿನ ಸಂಘಗಳನ್ನು ಸೇರಿಸಲಾಗಿದೆ ಹಾಗೂ ಸಂಘಗಳಿಲ್ಲದ ಕಡೆಗಳಲ್ಲಿ ನೂತನ ಸಂಘಗಳನ್ನು ರಚಿಸಲಾಗಿದೆ.
ಉಪ್ಪಿನಂಗಡಿಯಲ್ಲಿ ನಡೆದ ಸಭೆಯಲ್ಲಿ ರೂಪೇಶ್ ರೈ ಅಲಿಮಾರ್, ಪ್ರಶಾಂತ್ ಶೆಟ್ಟಿ ಮಡಂತ್ಯಾರು, ಬಾಲಕೃಷ್ಣ ಆಳ್ವ ಕಲ್ಲಡ್ಕ, ಜಲೇಶ್ ಜೀವನಿ ಕಲ್ಲಡ್ಕ, ಶರತ್ ಕುಮಾರ್ ಕಲ್ಲಡ್ಕ, ಹೇರಂಭ ಶಾಸ್ತ್ರಿ, ರಶೀದ್, ಅನ್ವರ್, ಕಲಂದರ್ ಎ.ಕೆ. ಸುಫಾರಿ, ಕುಶಾಲ್ ಪಾಟೀಲ್, ನೀಲೇಶ್, ಕೆ. ರಫೀಕ್, ಎನ್. ಅಬೂಬಕ್ಕರ್, ಹಮೀದ್, ಯು.ರಾಮ, ಅಬ್ದುಲ್ ಹಾರೀಸ್ ಮತ್ತಿತರರು ಉಪಸ್ಥಿತರಿದ್ದರು.