ಪುಣಚ: ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಶವ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಆ.20ರಂದು ನಡೆದಿದೆ.ಅಜ್ಜಿನಡ್ಕ ಸಂಕೇಶ ನಿವಾಸಿ ತಿಮ್ಮಪ್ಪ ಪೂಜಾರಿ(60ವ.)ಮೃತಪಟ್ಟವರು.ತಿಮ್ಮಪ್ಪ ಪೂಜಾರಿಯವರು ನಾಪತ್ತೆಯಾಗಿದ್ದು ಮನೆಯವರು ಹುಡುಕಾಟ ನಡೆಸುತ್ತಿದ್ದ ವೇಳೆ ಮೃತದೇಹ ಬಾವಿಯೊಳಗೆ ಕಂಡು ಬಂದಿದೆ.
ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.ಮೃತರು ಪತ್ನಿ ಪೂವಕ್ಕ, ಪುತ್ರರಾದ ಡೀಕಯ್ಯ, ಶಿವು, ಪುತ್ರಿ ರಾಧಾ, ಸಹೋದರ ನಾರಾಯಣ ಪೂಜಾರಿರವರನ್ನು ಅಗಲಿದ್ದಾರೆ.